ಸಾಂದರ್ಭಿಕ ಚಿತ್ರ 
ದೇಶ

ಪಡಿತರ ವ್ಯವಸ್ಥೆ ಮೂಲಕ ಅಕ್ಕಿ ವಿತರಣೆಗೆ ಕೇಂದ್ರದಿಂದ 15 ರಾಜ್ಯಗಳ ಆಯ್ಕೆ 

ನಾಗರಿಕ ಸರಬರಾಜು ವ್ಯವಸ್ಥೆಯ ಮೂಲಕ ಸಾರವರ್ಧಿತ ಅಕ್ಕಿಯನ್ನು ವಿತರಿಸಲು 15 ರಾಜ್ಯಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

ನವದೆಹಲಿ: ನಾಗರಿಕ ಸರಬರಾಜು ವ್ಯವಸ್ಥೆಯ ಮೂಲಕ ಸಾರವರ್ಧಿತ ಅಕ್ಕಿಯನ್ನು ವಿತರಿಸಲು 15 ರಾಜ್ಯಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸಾರವರ್ಧಿತ ಅಕ್ಕಿಯನ್ನು ವಿತರಣೆ ಮಾಡಲು ಕೇಂದ್ರ ಸರ್ಕಾರ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ ಎಂದು  ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 174.6 ಕೋಟಿ ರೂ.ಗಳ ಯೋಜನಾ ವೆಚ್ಚದೊಂದಿಗೆ ಈ ಯೋಜನೆಯನ್ನು 2019-2020 ರಿಂದ ಮೂರು ವರ್ಷಗಳ ಅವಧಿಗೆ ಅನುಮೋದಿಸಲಾಗಿದೆ. ಪ್ರಾಯೋಗಿಕ  ಯೋಜನೆ ಅನುಷ್ಠಾನಕ್ಕಾಗಿ 15 ರಾಜ್ಯ ಸರ್ಕಾರಗಳು ಆಯಾ ಜಿಲ್ಲೆಗಳನ್ನು (ರಾಜ್ಯಕ್ಕೆ 1 ಜಿಲ್ಲೆ) ಗುರುತಿಸಿವೆ. ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಛತ್ತೀಸ್ ಗಢ ರಾಜ್ಯಗಳು ಆಯಾ ಜಿಲ್ಲೆಗಳಲ್ಲಿ ಸಾರ ವರ್ಧಿತ ಅಕ್ಕಿಯನ್ನು ವಿತರಣೆಯನ್ನು ಆರಂಭಿಸಿವೆ. 

ಈ ಸಂಬಂಧ ಅಕ್ಟೋಬರ್ 31 ರಂದು ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವ ಪಿಯೂಷ್ ಗೋಯೆಲ್ ನೇತೃತ್ವದಲ್ಲಿ ಪರಿಶೀಲನಾ ಸಭೆಯಲ್ಲಿ ದೇಶದಲ್ಲಿ ಸಾರವರ್ಧಿತ ಅಕ್ಕಿ ವಿತರಣೆಯನ್ನು ಹೆಚ್ಚಿಸಲು  ಒತ್ತು ನೀಡಲಾಗಿತ್ತು.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆದಿದ್ದು, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಯಡಿಯಲ್ಲಿ ದೇಶದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮತ್ತು ಖರೀದಿಗೆ ಸಮಗ್ರ ಯೋಜನೆ ರೂಪಿಸಲು ಭಾರತೀಯ ಆಹಾರ ನಿಗಮಕ್ಕೆ ಸೂಚಿಸಲಾಯಿತು. ದೇಶದಲ್ಲಿ 112 ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿಯನ್ನು ಪೂರೈಸಲು ವಿಶೇಷ ಗಮನ ಹರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ, ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video