ಮತದಾನ 
ದೇಶ

ಉಪ ಚುನಾವಣೆ: 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ

ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದೇಶದ 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣಾ ಮತದಾನ ಆರಂಭವಾಗಿದೆ.

ನವದೆಹಲಿ: ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದೇಶದ 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣಾ ಮತದಾನ ಆರಂಭವಾಗಿದೆ.

ಕರ್ನಾಟಕದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಮಾತ್ರವಲ್ಲದೇ ದೇಶದ ಒಟ್ಟು 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿದೆ, ಮಧ್ಯಪ್ರದೇಶದ 28, ಗುಜರಾತ್‌ನ 8, ಉತ್ತರಪ್ರದೇಶದಲ್ಲಿ 7, ಒಡಿಶಾ, ನಾಗಾಲ್ಯಾಂಡ್, ಕರ್ನಾಟಕ ಮತ್ತು  ಜಾರ್ಖಂಡ್‌ನಲ್ಲಿ ತಲಾ 2 ಸ್ಥಾನಗಳು ಮತ್ತು ಛತ್ತೀಸ್‌ಗಢ, ತೆಲಂಗಾಣ ಮತ್ತು ಹರಿಯಾಣದಲ್ಲಿ ತಲಾ ಒಂದು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದ 28 ಸ್ಥಾನಗಳ ಪೈಕಿ 25 ಸ್ಥಾನಗಳು ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಖಾಲಿಯಾದವು. 25 ಶಾಸಕರ ರಾಜಿನಾಮೆಯಿಂದಾಗಿ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿದು ಸರ್ಕಾರ ಪತನವಾಯಿತು.  ಬಳಿಕ ರೆಬೆಲ್ ಶಾಸಕ ಬೆಂಬಲ ಪಡೆದ ಬಿಜೆಪಿಯ ಶಿವರಾಜ್ ಸಿಂಗ್ ಚೌಹ್ವಾಣ್ ಸರ್ಕಾರ ರಚನೆ ಮಾಡಿದರು.  ಕೇಂದ್ರ ರಾಜ್ಯದ ಶಾಸಕರ ನಿಧನದ ನಂತರ ಇತರ ಮೂರು ಸ್ಥಾನಗಳನ್ನು ಖಾಲಿ ಎಂದು ಘೋಷಿಸಲಾಯಿತು. ಉಳಿದ ಮೂರು ಕ್ಷೇತ್ರಗಳಲ್ಲಿ ಶಾಸಕರು ನಿಧನರಾದ ಹಿನ್ನಲೆಯಲ್ಲಿ ಈ ಮೂರು ಕ್ಷೇತ್ರ  ಸೇರಿದಂತೆ ಒಟ್ಟು 28 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ಗುಜರಾತ್‌ನಲ್ಲಿ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಅನಿವಾರ್ಯತೆ ಇಲ್ಲಿ ಸೃಷ್ಟಿಯಾಗಿತ್ತು.  ಅಂತೆಯೇ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ದುಬ್ಬಕಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ  ಸಮಿತಿ (ಟಿಆರ್‌ಎಸ್) ಶಾಸಕ ಸೊಲಿಪೇಟಾ ರಾಮಲಿಂಗ ರೆಡ್ಡಿ ಅವರ ಹಠಾತ್ ನಿಧನದಿಂದಾಗಿ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಇದಲ್ಲದೆ ಹರಿಯಾಣದ ಬರೋಡಾದ ಸೋನಿಯಾಪಟ್ಟಿ ಶಾಸಕರಾಗಿದ್ದ ಕ್ರಿಶನ್ ಹೂಡಾ ಅವರು ನಿಧನದಿಂದಾಗಿ ಇಲ್ಲಿ ಉಪ ಚುನಾವಣೆ ಅನಿವಾರ್ಯತೆ ಸೃಷ್ಟಿಯಾಗಿದೆ. ನವೆಂಬರ್  10ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.

ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪಟ್ಟಿ ಇಂತಿದೆ.
ಮಧ್ಯಪ್ರದೇಶ: ಜೌರಾ, ಸುಮಾಲಿ, ಮೊರೆನಾ, ಡಿಮಾನಿ, ಅಂಬಾ, ಮೆಹಗಾಂವ್, ಗೋಹಾದ್, ಗ್ವಾಲಿಯರ್, ಗ್ವಾಲಿಯರ್ ಈಸ್ಟ್, ದಬ್ರಾ, ಭಂದರ್, ಕರೇರಾ, ಪೊಹಾರಿ, ಬಮೋರಿ, ಅಶೋಕ್ ನಗರ, ಮುಂಗಾವಳಿ, ಸುರ್ಖಿ, ಮಲ್ಹರಾ, ಅನುಪ್ಪೂರ್, ಸಾಂಚಿ, ಬಿಯಾತ್ ಮಿಯಾಪತ್ ನೇಪನಗರ, ಬದ್ನವಾರ್, ಸಾನ್ವರ್  ಮತ್ತು ಸುವಸ್ರಾ 

ಗುಜರಾತ್: ಅಬ್ದಾಸಾ, ಲಿಮ್ಡಿ, ಮೊರ್ಬಿ, ಧಾರಿ, ಗಡಾಡಾ (ಎಸ್‌ಟಿ), ಕಾರ್ಜನ್, ಡ್ಯಾಂಗ್ಸ್ (ಎಸ್‌ಟಿ) ಮತ್ತು ಕಪ್ರಡಾ (ಎಸ್‌ಟಿ)

ಉತ್ತರ ಪ್ರದೇಶ: ನೌಗಾಂವ್, ಘಟಂಪೂರ್ (ಕಾನ್ಪುರ್), ಬುಲಂದ್‌ಶಹರ್, ತುಂಡ್ಲಾ (ಫಿರೋಜಾಬಾದ್), ಬಂಗರ್ಮೌ (ಉನ್ನಾವೊ), ಡಿಯೋರಿಯಾ ಮತ್ತು ಮಲ್ಹಾನಿ

ಕರ್ನಾಟಕ: ಶಿರಾ, ರಾಜರಾಜೇಶ್ವರಿ ನಗರ

ಒಡಿಶಾ: ಬಾಲಸೋರ್, ಟಿರ್ಟಾಲ್

ಜಾರ್ಖಂಡ್: ಡುಮ್ಕಾ, ಬರ್ಮೊ

ನಾಗಾಲ್ಯಾಂಡ್: ದಕ್ಷಿಣ ಅಂಗಾಮಿ- I, ಪುಂಗ್ರೊ-ಕಿಫೈರ್

ತೆಲಂಗಾಣ: ದುಬ್ಬಾಕಾ

ಛತ್ತೀಸ್‌ಗಢ: ಮಾರ್ವಾಹಿ

ಹರಿಯಾಣ: ಬರೋಡಾ
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ