ದೇಶ

ಚೀನಾದಿಂದ ಯಾವುದೇ ಬೆದರಿಕೆಯನ್ನು ದೇಶ ತಡೆಯುವಲ್ಲಿ ಎಐಎಫ್ ನ ಕಠಿಣ ನಿಲುವು ನೆರವು- ಬದೌರಿಯಾ

Nagaraja AB

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ವಿವಾದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ವಾಯುಪಡೆ ತಾಳಿದ ಕಠಿಣ ನಿಲುವು ಎದುರಾಳಿಯನ್ನು ದೊಡ್ಡಮಟ್ಟದಲ್ಲಿ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಾಯುಸೇನೆ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ ಹೇಳಿದ್ದಾರೆ.

ರಾಷ್ಟ್ರೀಯ ರಕ್ಷಣಾ ಕಾಲೇಜ್ ಆಯೋಜಿಸಿದ್ದ ಆನ್ ಲೈನ್ ಸೆಮಿನಾರ್ ನಲ್ಲಿ ಮಾತನಾಡಿದ ವಾಯುಪಡೆಯ ಮುಖ್ಯಸ್ಥರು, ಪಾಕಿಸ್ತಾನದ ಬಾಲಕೋಟ್ ವಾಯುದಾಳಿ,  ವಾಯು ಶಕ್ತಿಯನ್ನು ಅತ್ಯಾಧುನಿಕ ರೀತಿಯಲ್ಲಿ ಬಳಕೆಗೆ ತರಬಹುದು ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ ಎಂದು  ಭಾರತೀಯ ವಾಯುಪಡೆಯ  ಮುಖ್ಯಸ್ಥರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ಪೂರ್ವ ಲಡಾಖ್‌ನ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ ಪೂರ್ವಭಾವಿಯಾಗಿ ನಮ್ಮ ಆಕ್ರಮಣಕಾರಿ ಸಾಮರ್ಥ್ಯ,   ವಾಯು ಸಾಧನ, ಸಲಕರಣೆಗಳ ನಿಯೋಜನೆ ಮತ್ತು ಸೈನ್ಯದ ಯುದ್ಧ ಅಂಶ ಕ್ಷಿಪ್ರ ವಿಮಾನಯಾನ, ಐಎಎಫ್‌ ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದರು.

ಐಎಎಫ್ ತನ್ನ ಎಲ್ಲಾ ಮುಂಚೂಣಿಯ ಯುದ್ಧವಿಮಾನಗಳಾದ ಸುಖೋಯ್ 30 ಎಂಕೆಐ, ಜಾಗ್ವಾರ್ ಮತ್ತು ಮಿರಾಜ್ 2000 ವಿಮಾನಗಳನ್ನು ಪೂರ್ವ ಲಡಾಕ್‌ನ ಪ್ರಮುಖ ಗಡಿಯ  ವಾಯುನೆಲೆಗಳಲ್ಲಿ ಮತ್ತು ಎಲ್ ಎಸಿಯ ಉದ್ದಕ್ಕೂ ನಿಯೋಜಿಸಿದೆ. ಹೊಸದಾಗಿ ಸೇರ್ಪಡೆಗೊಂಡ ರಫೇಲ್ ಜೆಟ್‌ಗಳು ಪೂರ್ವ ಲಡಾಕ್‌ನಲ್ಲಿ ಸಹಾ ಸಾಗುತ್ತಿವೆ.
 

SCROLL FOR NEXT