ದೇಶ

ಲಡಾಕ್ ಲಡಾಯಿ: ಭಾರತ-ಚೀನಾ ಮಧ್ಯೆ ಇಂದು 8ನೇ ಸುತ್ತಿನ ಮಾತುಕತೆ 

Sumana Upadhyaya

ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಶುಕ್ರವಾರ ಪೂರ್ವ ಲಡಾಕ್ ನ ಗಡಿ ಸಂಘರ್ಷ ಬಗ್ಗೆ 8ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಚುಶುಲ್ ಎಂಬಲ್ಲಿ ನಡೆಯುತ್ತಿದೆ.

ಭಾರತದ ಕಡೆಯಿಂದ 14ನೇ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿ ಜಿ ಕೆ ಮೆನನ್ ನೇತೃತ್ವ ವಹಿಸಲಿದ್ದಾರೆ. ಈಗಾಗಲೇ ಎರಡೂ ಕಡೆಯಿಂದ 7 ಸುತ್ತಿನ ಮಾತುಕತೆ ಮುಗಿದಿದ್ದು ಪೂರ್ವ ಲಡಾಕ್ ವಲಯದಲ್ಲಿ ಗಡಿ ಸಂಘರ್ಷದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ಮಾತುಕತೆ ನಡೆದಿದೆ.ಕಳೆದ ಬಾರಿ ಮಾತುಕತೆ ನಡೆದಿದ್ದು ಅಕ್ಟೋಬರ್ 12ರಂದು.

ಕಳೆದ ಆರು ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿ ವಾಸ್ತವ ರೇಖೆಯಲ್ಲಿ ಸಂಘರ್ಷದಲ್ಲಿ ನಿರತವಾಗಿವೆ. ಚೀನಾವೇ ಆರಂಭದಲ್ಲಿ ಗಡಿಭಾಗದಲ್ಲಿ ಸೇನೆ ತಂದು ನಿಲ್ಲಿಸಿದ್ದು ಅದಕ್ಕೆ ಭಾರತ ತಕ್ಕ ದಿಟ್ಟ ಪ್ರತಿಕ್ರಿಯೆ ನೀಡುತ್ತಲೇ ಬಂದಿದೆ. 

SCROLL FOR NEXT