ಕಾಮಾಕ್ಯ ದೇಗುಲಕ್ಕೆ ಅಂಬಾನಿ ದಂಪತಿಯಿಂದ 19 ಕೆ ಜಿ ಚಿನ್ನ ದಾನ! 
ದೇಶ

ಕಾಮಾಕ್ಯ ದೇಗುಲಕ್ಕೆ ಅಂಬಾನಿ ದಂಪತಿಯಿಂದ 19 ಕೆ ಜಿ ಚಿನ್ನ ದಾನ!

ಅಸ್ಸಾಂನ ಕಾಮಾಕ್ಯ ದೇವಿ ದೇಗುಲಕ್ಕೆ ರಿಲೆಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ದಂಪತಿ ಭಾರಿ ಪ್ರಮಾಣ ಚಿನ್ನ ದೇಣಿಗೆಯಾಗಿ ನೀಡಿದ್ದಾರೆ. ದೇಗುಲ ಗೋಪುರದ ಮೂರು ಕಲಶಗಳ ನಿರ್ಮಾಣಕ್ಕಾಗಿ 19 ಕೆ.ಜಿ ಚಿನ್ನ ದಾನ ಮಾಡಿದ್ದಾರೆ.

ಗುವಾಹಟಿ: ಅಸ್ಸಾಂನ ಕಾಮಾಕ್ಯ ದೇವಿ ದೇಗುಲಕ್ಕೆ ರಿಲೆಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ದಂಪತಿ ಭಾರಿ ಪ್ರಮಾಣ ಚಿನ್ನ ದೇಣಿಗೆಯಾಗಿ ನೀಡಿದ್ದಾರೆ. ದೇಗುಲ ಗೋಪುರದ ಮೂರು ಕಲಶಗಳ ನಿರ್ಮಾಣಕ್ಕಾಗಿ 19 ಕೆ.ಜಿ ಚಿನ್ನ ದಾನ ಮಾಡಿದ್ದಾರೆ.

ಈ ಚಿನ್ನದಿಂದ ಗೋಪುದ ಮೂರು ಕಲಶಗಳನ್ನು ನಿರ್ಮಿಸಲಾಗುತ್ತಿದೆ. ಮೂರು ತಿಂಗಳ ಹಿಂದೆ ಕಾಮಾಕ್ಯ  ದೇಗುಲಕ್ಕೆ ಚಿನ್ನ ದಾನ ಮಾಡುವುದಾಗಿ ಅಂಬಾನಿ ದಂಪತಿ  ವಾಗ್ದಾನ ಮಾಡಿದ್ದರು ಎಂದು ಕಾಮಾಕ್ಯ ದೇಗುಲದ   ಮೂಲಗಳು ಹೇಳಿವೆ. ಗೋಪುರದ ಮೂರು ಕಲಶಗಳ  ನಿರ್ಮಾಣ ವೆಚ್ಚವನ್ನು ತಾವೇ ಭರಿಸುವುದಾಗಿ ಅಂಬಾನಿ  ಹೇಳಿದ್ದರು. 

ವಾಗ್ದಾನದಂತೆ, ರಿಲೆಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾಗಿ ಚಿನ್ನ ನೀಡಲಾಗಿದೆ. ಕಲಶಗಳ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿದ್ದು, ನಿರ್ಮಾಣ ಕಾರ್ಯದಲ್ಲಿ ಶಿಲ್ಪಿಗಳ ಜೊತೆಗೆ ರಿಲೆಯನ್ಸ್ ಎಂಜಿನಿಯರ್‌ಗಳು ಸಹ ಭಾಗಿಯಾಗಿದ್ದಾರೆ. 

ಈ ಕಲಶಗಳ ನಿರ್ಮಾಣ ಪೂರ್ಣಗೊಂಡ ನಂತರ ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಕಾಮಾಕ್ಯ ಅಮ್ಮನವರ  ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ದೇಶದ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಾಲಯ ಅಸ್ಸಾಂನ ನೀಲಾಚಲ ಪರ್ವತಗಳಲ್ಲಿದ್ದು, ದೇಶಾದ್ಯಂತದ ಪ್ರತಿವರ್ಷ ಲಕ್ಷಾಂತರ  ಭಕ್ತರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT