ದೇಶ

ಸರಣಿ ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಅರೆಸ್ಟ್

Raghavendra Adiga

ಕಾಸರಗೋಡು: ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್ ನಿಂದ ಸರಣಿ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಕೇರಳದ ಮಂಜೇಶ್ವರ ಕ್ಷೇತ್ರದ ಐಯುಎಂಎಲ್ ಶಾಸಕ ಎಂ ಸಿ ಕಮರುದ್ದೀನ್ ರನ್ನು ಅಲ್ಲಿನ ರಾಜ್ಯ ಅಪರಾಧ ವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈಗಾಗಲೇ ಇಂಡಿಯನ್ ಯೂನಿಯನ್ ಮುಸ್ಲೀಂಲೀಗ್ (ಐಯುಎಂಎಲ್) ಕಮರುದ್ದೀನ್ ರಾಜೀನಾಮೆಯನ್ನು ಪಡೆಯಲು ನಿರ್ಧರಿಸಿದೆ. 

ಶಾಸಕ ಕಮರುದ್ದೀನ್ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಅವರು ಗುಂಪಿನ ನೂರಾರು ಹೂಡಿಕೆದಾರರಿಗೆ 100 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ ಗ್ರೂಪ್ ನ ಪಾಲುದಾರರಾದ ವ್ಯವಸ್ಥಾಪಕ ನಿರ್ದೇಶಕ ಪೂಕೋಯಾ ತಂಗಲ್ ಅವರನ್ನೂ ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಚಾಂತೇರಾ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಅಪ್ರಾಮಾಣಿಕತೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ರ ಅಡಿಯಲ್ಲಿ ದಾಖಲಾದ ನಾಲ್ಕುಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳಿಗ್ಗೆ ಶಾಸಕರನ್ನು ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

SCROLL FOR NEXT