ದೇಶ

ಭಾರತ-ಚೀನಾ ಮಧ್ಯೆ ಸದ್ಯದಲ್ಲಿಯೇ 9ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ: ಕೇಂದ್ರ ಸರ್ಕಾರ 

Sumana Upadhyaya

ನವದೆಹಲಿ: ಚುಶುಲ್ ನಲ್ಲಿ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 8ನೇ ಸುತ್ತಿನ ಮಾತುಕತೆ ಏರ್ಪಟ್ಟಿದೆ. ಎರಡೂ ಕಡೆಯಿಂದ ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆಯನ್ನು ನಿಷ್ಕ್ರಿಯಗೊಳಿಸುವಿಕೆಯ ಬಗ್ಗೆ ನಿಸ್ಸಂಶಯ, ಆಳವಾದ ಮತ್ತು ರಚನಾತ್ಮಕ ಅಭಿಪ್ರಾಯಗಳ ವಿನಿಮಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯಲ್ಲಿ ಸೇನೆ ನಿಲುಗಡೆಗೆ ಸಂಬಂಧಪಟ್ಟಂತೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ- ಚೀನಾ ದೇಶಗಳು ಮಾತುಕತೆ ಮತ್ತು ಸಂವಹನವನ್ನು ನಿರ್ವಹಿಸಿಕೊಂಡು ಬಂದಿದ್ದು ಅದನ್ನು ಮುಂದುವರಿಸಿಕೊಂಡು ಹೋಗಲು ಈ ಸಭೆಯಲ್ಲಿ ನಿರ್ಣಯಿಸಲಾಯಿತು. ಇತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಭೆಯಲ್ಲಿ ಒತ್ತು ನೀಡಲಾಯಿತು. ಈ ಮೂಲಕ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಭಾತೃತ್ವವನ್ನು ಜಂಟಿಯಾಗಿ ನಿರ್ವಹಿಸಲು ಸಹಮತ ವ್ಯಕ್ತಪಡಿಸಲಾಯಿತು ಎಂದು ಕೇಂದ್ರ ಸರ್ಕಾರ ಹೇಳಿದೆ.

ಎರಡೂ ದೇಶಗಳ ಮಧ್ಯೆ ಸದ್ಯದಲ್ಲಿಯೇ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೂಡ ಕೇಂದ್ರ ಸರ್ಕಾರ ತಿಳಿಸಿದೆ.

SCROLL FOR NEXT