ದೇಶ

ಬಿಹಾರ ಚುನಾವಣೆ: ಈ ವರೆಗೂ ಶೇ.20ರಷ್ಟು ಮಾತ್ರ ಮತ ಎಣಿಕೆ ಆಗಿದೆ, ಸಂಜೆಯವರೆಗೂ ಮುಂದುವರಿಯುತ್ತದೆ ಎಂದ ಚುನಾವಣಾ ಆಯೋಗ

Srinivasamurthy VN

ಪಾಟ್ನಾ: ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಸಂಜೆಯವರೆಗೂ ನಡೆಯಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಈ ಹಿಂದೆ ಸಂಜೆ 4.30ರವರೆಗೂ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ಸಂಜೆಯವರೆಗೂ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಹಾರದ ಮುಖ್ಯ ಚುನಾವಣಾ ಆಯುಕ್ತ ಹೆಚ್ ಆರ್ ಶ್ರೀನಿವಾಸ್ ಅವರು, ಬಿಹಾರ ಚುನಾವಣೆಯಲ್ಲಿ ಸುಮಾರು 4.10 ಕೋಟಿ ಮತದಾರರು ಮತದಾನ ಮಾಡಿದ್ದಾರೆ. ಈ ಪೈಕಿ ಈ ವರೆಗೂ 92 ಲಕ್ಷ ಮತಗಳ ಎಣಿಕೆಯಾಗಿದೆ. ಒಟ್ಟಾರೆ ಶೇ.20ರಷ್ಟು ಮತ ಎಣಿಕೆ  ಕಾರ್ಯ ಪೂರ್ಣಗೊಂಡಿದ್ದು, ದೀರ್ಘ ಸಮಯದವರೆಗೂ ಮತ ಎಣಿಕೆ ಕಾರ್ಯ ನಡೆಯುತ್ತದೆ. ಈ ಹಿಂದೆ 25-26 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ಬಾರಿ ಅದು 35 ಸುತ್ತು ದಾಟುವ ಸಾಧ್ಯತೆ ಇದೆ. ಇನ್ನೂ 34000 ಮತಗಟ್ಟೆಗಳ ಮತ ಎಣಿಕೆ ಬಾಕಿ ಇದೆ. ಹೀಗಾಗಿ ಸಂಜೆ ಅಥವಾ ರಾತ್ರಿ ವೇಳೆಗೆ  ಮತ ಎಣಿಕೆ ಕಾರ್ಯ ಮುಕ್ತಾಯಗೊಳ್ಳಬಹುದು ಎಂದು ಹೇಳಿದ್ದಾರೆ.

SCROLL FOR NEXT