ದೇಶ

 20 ವರ್ಷಗಳ ಬಳಿಕ ಪಾಕ್ ಜೈಲಿನಿಂದ ಒಡಿಶಾ ಗ್ರಾಮಕ್ಕೆ ಮರಳಿದ ಬುಡಕಟ್ಟು ವ್ಯಕ್ತಿ!

Vishwanath S

ರೂರ್ಕೆಲಾ: ಬರೋಬ್ಬರಿ 20 ವರ್ಷಗಳ ಬಳಿಕ ಪಾಕಿಸ್ತಾನದ ಜೈಲಿನಲ್ಲಿ ಬುಡಕಟ್ಟು ವ್ಯಕ್ತಿಯೋರ್ವ ಸ್ವಗ್ರಾಮಕ್ಕೆ ಮರಳಿದ್ದಾನೆ.

ಐವತ್ತು ವರ್ಷದ ಬುಡಕಟ್ಟು ವ್ಯಕ್ತಿ ಬಿರ್ಜು ಕುಲು ಒಡಿಶಾದಲ್ಲಿನ ತನ್ನ ಸ್ವಗ್ರಾಮಕ್ಕೆ ಮರಳಿದ್ದು ಅವರ ಸಂತೋಷಕ್ಕೆ ಪಾರವೇ ಇಲ್ಲ. 25ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದ ಕುಲು ಪಂಜಾಬ್‌ಗೆ ತೆರಳುವಾಗ ಪಾಕಿಸ್ತಾನದ ಭೂಪ್ರದೇಶವನ್ನು ತಪ್ಪಾಗಿ ದಾಟಿದ್ದರಿಂದ ಪಾಕಿಸ್ತಾನದಲ್ಲಿ ಜೈಲು ಪಾಲಾಗಿದ್ದ.

ಲಾಹೋರ್ ಜೈಲಿನಿಂದ ಬಿಡುಗಡೆಯಾದ ನಂತರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಬುಡಕಟ್ಟು ಪ್ರಾಬಲ್ಯದ ಸುಂದರ್‌ಗ ಜಿಲ್ಲೆಯ ಕುತ್ರಾ ಬ್ಲಾಕ್‌ನ ಕಟಂಗಾ ಗ್ರಾಮವನ್ನು ತಲುಪುತ್ತಿದ್ದಾಗ ಕುಲು ಅವರಿಗೆ ಸ್ಥಳೀಯ ನಿವಾಸಿಗಳು ಸ್ವಾಗತ ಕೋರಿದರು.

ಸಾಂಪ್ರದಾಯಿಕ ಬುಡಕಟ್ಟು ನೃತ್ಯ, ಸಂಗೀತ ಮತ್ತು ಡ್ರಮ್ಸ್ ಮತ್ತು ಇತರ ವಾದ್ಯಗಳೊಂದಿಗೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಕುಲುವನ್ನು ಸ್ವಾಗತಿಸಿದರು. ಕುಲು ಅವರು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಹತ್ತಿರದ ಪ್ರದೇಶಗಳ ಜನರು ಹಳ್ಳಿಯ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.

ಕುಲು ಹೆತ್ತವರು ಮೃತಪಟ್ಟಿದ್ದಾರೆ. ಆದರೆ ಅವರ ಬಿಡುಗಡೆಯ ಬಗ್ಗೆ ಮಾಹಿತಿ ಬಂದಾಗಿನಿಂದ ಅವರ ತಂದೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಸಹೋದರಿ ಮತ್ತು ಅವರ ಕುಟುಂಬವು ಅವರಿಗಾಗಿ ಕಾತುರದಿಂದ ಕಾಯುತ್ತಿದ್ದರು.

SCROLL FOR NEXT