ದೇಶ

ರಾಜಸ್ಥಾನದಲ್ಲಿ ಪಟಾಕಿ ಬಳಸಿದರೆ 2 ಸಾವಿರ ದಂಡ!

Nagaraja AB

ಜೈಪುರ: ಜನರು ಪಟಾಕಿ ಬಳಸದೆ ದೀಪಾವಳಿ ಆಚರಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿಕೊಂಡಿದ್ದಾರೆ. ದಾಂತೇರಸ್ ಮತ್ತು ಚೋಟಿ ದೀಪಾವಳಿಯನ್ನು ಆಚರಿಸಿದಂತೆ ಈ ರಾತ್ರಿ ಪಟಾಕಿ ಹಚ್ಚದೆ ಜನರು ದೀಪಾವಳಿ ಆಚರಿಸುವ ವಿಶ್ವಾಸ ಹೊಂದಿರುವುದಾಗಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ಈ ಹಿಂದೆ ಕೂಡಾ ಮರುಭೂಮಿ ರಾಜ್ಯದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಷೇಧವನ್ನು ಅಶೋಕ್ ಗೆಹ್ಲೋಟ್ ಸಮರ್ಥಿಸಿಕೊಂಡಿದ್ದರು. ಇದು ಧಾರ್ಮಿಕ ಸಂಬಂಧಗಳನ್ನು ಮೀರಿದೆ ಎಂದು ಹೇಳಿಕೆ ನೀಡಿದ್ದರು.

ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.

ಯಾವುದೇ ಅಂಗಡಿ ಮಾಲೀಕರು ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ 10 ಸಾವಿರ, ಯಾರಾದರೂ ಪಟಾಕಿ ಬಳಸುವುದು ಕಂಡುಬಂದಲ್ಲಿ 2 ಸಾವಿರ ದಂಡವನ್ನು ವಿಧಿಸುವುದಾಗಿ ರಾಜಸ್ಥಾನ ಸರ್ಕಾರ ಸೂಚನೆ ನೀಡಿದೆ.

SCROLL FOR NEXT