ದೇಶ

ನಿಷೇಧದ ನಡುವಲ್ಲೂ ಪಟಾಕಿ ಹಚ್ಚಿದ ಜನತೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತ್ಯಂತ ಕಳಪೆ ಮಟ್ಟಕ್ಕಿಳಿದ ವಾಯು ಗುಣಮಟ್ಟ

Manjula VN

ನವದೆಹಲಿ: ಪಟಾಕಿ ನಿಷೇಧ ಉಲ್ಲಂಘಿಸಿ ಹಲವು ಕಡೆಗಳಲ್ಲಿ ಜನರು ದೀಪಾವಳಿ ಆಚರಿಸಿದ್ದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. 

ದೆಹಲಿಯಲ್ಲಿ ಶನಿವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 414 ಅಂಕ ದಾಖಲಾಗಿದೆ. ಇದಕ್ಕೆ ಶೇ.32ರಷ್ಟು ಕಾರಣ ಹೊಲ-ಗದ್ದೆಗಳಿಗೆ ರೈತರು ಬೆಂಕಿ ಹಾಕಿದ್ದು ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಕಳೆದ ವರ್ಷ ದೀಪಾವಳಿಯ ವೇಳೆ ಎಕ್ಯೂಐ 368 ಅಂಕ ದಾಖಲಾಗಿತ್ತು. ಮುಂದಿನ ಎರಡು ದಿನಗಳಲ್ಲಿ ಅದು 400ಕ್ಕೆ ಏರಿಕೆಯಾಗಿತ್ತು. ಆದರೆ, ಈ ವರ್ಷ ದೀಪಾವಳಿ ಆರಂಭದಲ್ಲೇ ಎಕ್ಯೂಐ ಪ್ರಮಾಣ 400 ಅಂಕ ಗಡಿ ದಾಟಿದೆ. 

ವಾಯುಗುಣಮಟ್ಟ ಕ್ಷೀಣಿಸಿದ ಪರಿಣಾಮ, ದೆಹಲಿಯಲ್ಲಿ ದಪ್ಪ ಹೊಗೆಯ ಪದರ ಸೃಷ್ಟಿಯಾಗಿದ್ದು, ಗೋಚರತೆ ಕೂಡ ಕುಗ್ಗಿ ಹೋಗಿದೆ.

ನಾಗರಿಕರಲ್ಲಿ ಕಣ್ಣು ಉರಿ, ಗಂಟಲು ನೋವು, ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದೆ. ಹೀಗಾಗಿ, ಕೊರೊನಾ ಸೋಂಕಿನ ವ್ಯಾಪಿಸುವಿಕೆ ಅಧಿಕವಾಗುವ ಆತಂಕವೂ ಇದೀಗ ಎದುರಾಗಿದೆ. 

SCROLL FOR NEXT