ದೇಶ

ಖುಷ್ಬೂ ನಂತರ ಕಾಂಗ್ರೆಸ್ ತೊರೆದ ಅಪ್ಸರಾ ರೆಡ್ಡಿ, ಮತ್ತೆ ಎಐಎಡಿಎಂಕೆ ಸೇರಲಿದ್ದಾರೆ ತೃತೀಯಲಿಂಗಿ

Lingaraj Badiger

ಚೆನ್ನೈ: ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆಲವೇ ವಾರಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೊದಲ ತೃತೀಯಲಿಂಗಿ ಅಪ್ಸರಾ ರೆಡ್ಡಿ ಅವರು ಸಹ ಕಾಂಗ್ರೆಸ್ ತೊರೆದಿದ್ದು, ಮತ್ತೆ ಎಐಎಡಿಎಂಕೆ ಸೇರಲು ನಿರ್ಧರಿಸಿದ್ದಾರೆ.

ಅಪ್ಸರಾ ರೆಡ್ಡಿ ಅವರು ಮೂರು ವರ್ಷಗಳ ನಂತರ ಮತ್ತೆ ಎಐಎಡಿಎಂಕೆಗೆ ಬರುತ್ತಿದ್ದು, ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ ಪನ್ನೀರ್ ಸೇಲ್ವಂ ಅವರ ನೇತೃತ್ವದಲ್ಲಿ ಪಕ್ಷ ಸೇರಲಿದ್ದಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ರೆಡ್ಡಿ, ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಅಮ್ಮನ ನಿಯಮವನ್ನು ಪಾಲಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಎಐಎಡಿಎಂಕೆಯಲ್ಲಿ ತೃತೀಯಲಿಂಗಿ ಮಹಿಳೆಗೆ ಸರಿಯಾದ ಮಾನ್ಯತೆ ಸಿಗುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಏಕೆಂದರೆ ನಾನು ಅದನ್ನು ಅಮ್ಮನ ಕಾಲದಲ್ಲಿ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. 

ಎಐಎಡಿಎಂಕೆ ಯಲ್ಲಿ ಯಾವುದೇ ಸ್ಥಾನವನ್ನು ನಿರೀಕ್ಷಿಸುತ್ತಿಲ್ಲ. ಆದರೆ ಅವರು ನೀಡುವ ಯಾವುದೇ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ರೆಡ್ಡಿ ತಿಳಿಸಿದ್ದಾರೆ.

SCROLL FOR NEXT