ದೇಶ

#MeToo: ಇತ್ಯರ್ಥಕ್ಕೆ ಮುಂದಾಗಲು ಎಂಜೆ ಅಕ್ಬರ್, ಪ್ರಿಯಾ ರಮಣಿ ನಿರಾಕರಣೆ 

Srinivas Rao BV

ನವದೆಹಲಿ: #MeToo ಅಭಿಯಾನದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡದಿದ್ದ ಪತ್ರಕರ್ತೆ ಪ್ರಿಯಾ ರಮಣಿ, ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ಕ್ರಿಮಿನಲ್ ಮಾನಹಾನಿ ದೂರು ಪ್ರಕರಣದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. 

ತಮ್ಮ ವಿರುದ್ಧ ಆರೋಪ ಹೊರಿಸಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್ ದೆಹಲಿ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 
  
ಅಕ್ಬರ್ ಪರ ವಾದ ಮಂಡಿಸಿದ ಗೀತಾ ಲುಥ್ರಾ, ರಮಣಿ ಅವರು ತಮ್ಮ ಆರೋಪಗಳ ಬಗ್ಗೆ ಪಶ್ಚಾತ್ತಾಪ ಹೊಂದಿದ್ದರೆ, ತಮ್ಮ ಕಕ್ಷಿದಾರರಿಗೆ ಪ್ರಕರಣ ವಾಪಸ್ ಪಡೆಯುವುದಕ್ಕೆ ಸಲಹೆ ನೀಡುವುದನ್ನು ಪರಿಗಣಿಸುತ್ತೇನೆ ಎಂದು ಹೇಳಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಮಣಿ ಪರ ವಕೀಲರು ಅಕ್ಬರ್ ಗೆ ಬೇಕಾದರೆ ಅವರು ಪ್ರಕರಣವನ್ನು ವಾಪಸ್ ಪಡೆಯಲಿ ಎಂದು ಹೇಳಿದ್ದಾರೆ. ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೇ ಭಾನುವಾರದಂದೂ ಎರಡೂ ಪಕ್ಷದವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಮುಂದಾಗುವ ಸಾಧ್ಯತೆಗಳಿವೆಯೇ ಎಂದು ಪ್ರಶ್ನಿಸಿತ್ತು.

SCROLL FOR NEXT