ದೇಶ

ಕೇಂದ್ರದಿಂದ ಹೊಸ ಕೋವಿಡ್-19 ಮಾರ್ಗಸೂಚಿ ಬಿಡುಗಡೆ; ಡಿ.1 ರಿಂದ ಜಾರಿ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಡಿ.1 ರಿಂದ ಜಾರಿಗೆ ಬರಲಿದೆ. 

ಹೊಸ ಮಾರ್ಗಸೂಚಿಯಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ನಿಯಂತ್ರಕ ಕ್ರಮಗಳನ್ನು, ಜನ ಸಂದಣಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ಕೋವಿಡ್-19 ನಿಯಂತ್ರಣಕ್ಕೆ ಸ್ಥಳೀಯವಾಗಿ ಕಂಟೈನ್ಮೆಂಟ್ ಜೋನ್ ಗಳಲ್ಲಿ ರಾತ್ರಿ ವೇಳೆ ಕರ್ಫ್ಯೂ ವಿಧಿಸುವಂತಹ  ನಿರ್ಬಂಧಗಳನ್ನು ಜಾರಿಗೊಳಿಸಬಹುದಾಗಿದೆ, ಆದರೆ ಕಂಟೈನ್ಮೆಂಟ್ ಜೋನ್ ಗಳ ಹೊರತಾಗಿಯೂ ಸ್ಥಳೀಯ ಲಾಕ್ ಡೌನ್ ವಿಧಿಸುವುದಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯಗಳು ಅನುಮತಿ ಪಡೆಯುವುದನ್ನು ಹೊಸ ಮಾರ್ಗಸೂಚಿಯಲ್ಲಿ ಕಡ್ಡಾಯಗೊಳಿಸಲಾಗಿದೆ.

ಕಂಟೈನ್ಮೆಂಟ್ ಜೋನ್ ಗಳ ಪಟ್ಟೊಯನ್ನು ಜಿಲ್ಲಾಧಿಗಳು ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾರೆ. ಈ ಪಟ್ಟಿಯನ್ನು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೂ ಹಂಚಿಕೊಳ್ಳಲಾಗುತ್ತದೆ.

ಕಂಟೈನ್ಮೆಂಟ್ ಜೋನ್ ಗಳಲ್ಲಿ ಪ್ರೊಟೋಕಾಲ್ ಗೆ ಅನುಗುಣವಾಗಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗುತ್ತದೆ. 

SCROLL FOR NEXT