ಅಹ್ಮದ್ ಪಟೇಲ್ ಅಂತಿಮ ಸಂಸ್ಕಾರ 
ದೇಶ

ಹುಟ್ಟೂರಿನಲ್ಲಿ ಅಹ್ಮದ್ ಪಟೇಲ್ ಅಂತ್ಯಸಂಸ್ಕಾರ: ರಾಹುಲ್ ಭಾಗಿ

ನಿನ್ನೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜಕೀಯ ತಂತ್ರಗಾರ, ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರು ಗುಜರಾತಿನ ಬುರೂಜ್ ಜಿಲ್ಲೆಯ ಪಿರಮನ್ ಗ್ರಾಮದಲ್ಲಿ  ನೆರವೇರಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತಿತರರು  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರೂಚ್: ನಿನ್ನೆ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜಕೀಯ ತಂತ್ರಗಾರ, ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರು ಗುಜರಾತಿನ ಬುರೂಜ್ ಜಿಲ್ಲೆಯ ಪಿರಮನ್ ಗ್ರಾಮದಲ್ಲಿ  ನೆರವೇರಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತಿತರರು  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಡೋದರಾದಿಂದ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರವನ್ನು ಪಿರಮನ್ ಗ್ರಾಮಕ್ಕೆ ತರಲಾಯಿತು. ನೂರಾರು ಕಾಂಗ್ರೆಸ್ ಮಖಂಡರು, ಸ್ಥಳೀಯ ಸಮ್ಮುಖದಲ್ಲಿ ಮುಸ್ಲಿಂ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಬುಧವಾರ ರಾತ್ರಿ ವಡೋದರಾ ವಿಮಾನ ನಿಲ್ದಾಣ ತಲುಪಿದ ಪಾರ್ಥಿವ ಶರೀರವನ್ನು ಅಂಕಲೇಶ್ವರದ ಸರ್ದಾರ್ ಪಟೇಲ್ ಆಸ್ಪತ್ರೆಯಲ್ಲಿ ಇಡಲಾಗಿತ್ತು.

ಇಂದು ಬೆಳಿಗ್ಗೆ ಸೂರತ್ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ  ರಸ್ತೆ ಮೂಲಕ ಪಿರಮಾನ್ ತಲುಪಿದ ರಾಹುಲ್ ಗಾಂಧಿ, ಮಾಜಿ ಸಂಸದರ ದುಃಖಿತ ಕುಟುಂಬವನ್ನು ಸಮಾಧಾನಪಡಿಸಿದರು. ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರವನ್ನು ಅವರ ಹೆತ್ತವರ ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಗಿದೆ ಎಂದು  ಸ್ಥಳೀಯ ನಿವಾಸಿ ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!