ದೇಶ

ಎನ್ಎಸ್ಎ ಅಜಿತ್ ದೊವಲ್- ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ದ್ವಿಪಕ್ಷೀಯ ಮಾತುಕತೆ 

Srinivas Rao BV

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶುಕ್ರವಾರದಂದು ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ಪ್ರಧಾನಿ ಮಹಿಂದಾ ರಾಜಪಕ್ಸ ಜೊತೆಗೆ ರಕ್ಷಣಾ ಕಾರ್ಯದರ್ಶಿಗಳನ್ನೂ ಭೇಟಿ ಮಾಡಿರುವ ಅಜಿತ್ ದೋವಲ್, ಪ್ರಾದೇಶಿಕವಾಗಿ ಶಾಂತಿ ಮತ್ತು ಭದ್ರತೆಯನ್ನು ಹೆಚ್ಚಿಸುವ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ  ಮಾಲ್ಡೀವ್ಸ್, ಲಂಕಾ, ಭಾರತದ ತ್ರಿಪಕ್ಷೀಯ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಲಂಕಾ ಆಯೋಜಿಸಿದ್ದು ಈ ಸಭೆಯಲ್ಲಿ ದೋವಲ್ ಭಾಗಿಯಾಗಲಿದ್ದಾರೆ. ಕಡಲ ಭದ್ರತಾ ಸಹಕಾರದ ಕುರಿತು ಸಭೆಯಲ್ಲಿ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ.

6 ವರ್ಷಗಳ ಹಿಂದೆ ನವದೆಹಲಿಯಲ್ಲಿ ನಡೆದ ಸಭೆಯ ಬಳಿಕ ಇದೇ ಮೊದಲ ಬಾರಿಗೆ ಕಡಲ ಭದ್ರತಾ ಸಹಕಾರದ ಸಭೆ ಆಯೋಜನೆಯಾಗುತ್ತಿದೆ. ಅಜಿತ್ ದೋವಲ್ ವರ್ಷದಲ್ಲಿ ಎರಡನೇ ಬಾರಿಗೆ ಲಂಕಾಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಜನವರಿಯಲ್ಲಿ ದೋವಲ್ ಲಂಕಾಗೆ ಭೇಟಿ ನೀಡಿದ್ದರು. 

SCROLL FOR NEXT