ಅಹಮದಾಬಾದ್'ನ ಝೈಡಸ್ ಪಾರ್ಕ್'ಗೆ ಭೇಟಿ ನೀಡಿದ ಪ್ರಧಾನಿ ಮೋದಿ 
ದೇಶ

ಕೋವಿಡ್-19 ಲಸಿಕೆ ಅಭಿವೃದ್ಧಿ: ಝೈಡಸ್ ಬಯೋಟೆಕ್ ಪಾರ್ಕ್'ಗೆ ತೆರಳಿದ ಪ್ರಧಾನಿ ಮೋದಿ, ವಿಜ್ಞಾನಿಗಳೊಂದಿಗೆ ಸಮಾಲೋಚನೆ

ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಮುಂದಾಗಿರುವ ಪ್ರಧಾನಿ ಮೋದಿಯವರು ಶನಿವಾರ ಅಹಮದಾಬಾದ್'ಗೆ ಭೇಟಿ ನೀಡಿದ್ದು, ಇಲ್ಲಿಂದ 20 ಕಿಮೀ ದೂರದಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್'ಗೆ ತೆರಳಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಮುಂದಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶನಿವಾರ ಅಹಮದಾಬಾದ್'ಗೆ ಭೇಟಿ ನೀಡಿದ್ದು, ಅಹಮದಾಬಾದ್'ನಿಂದ 20 ಕಿಮೀ ದೂರದಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್'ಗೆ ತೆರಳಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಝೈಡಸ್ ಕ್ಯಾಡಿಲಾ ಕಂಪನಿಯು ಈಗಾಗಲೇ ಕೊರೋನಾಗೆ ಝೈಕೋವಿಡ್-ಡಿ ಎಂಬ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಅದು 2ನೇ ಹಂತ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ. 

ಝೈಡಸ್ ಬಯೋಟೆಕ್ ಪಾರ್ಕ್'ಗೆ  ಭೇಟಿ ನೀಡಿದ ಬಳಿಕ ಮಧ್ಯಾಹ್ನ 12.30ರ ವೇಳೆಗ ವಿಶ್ವದ ಅತೀದೊಡ್ಡ ಲಸಿಕಾ ಉತ್ಪಾದನಾ ಕೇಂದ್ರವಾದ ಪುಣೆಯ ಸೀರಂ ಇನ್'ಸ್ಟಿಟ್ಯೂಟ್'ಗೆ ಭೇಟಿ ನೀಡಲಿದ್ದಾರೆ. 

ಸೀರಂ ಇನ್ ಸ್ಟಿಟ್ಯೂಟ್ ಬ್ರಿಟನ್'ನ ಆಕ್ಸ್'ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಕ್ಕೆ ಒಳಪಡಿಸುವ ಗುತ್ತಿಗೆ ಪಡೆದುಕೊಂಡಿದೆ. ಇನ್ನು ಮಧ್ಯಾಹ್ನದ ಬಳಿಕ ಮೋದಿ ಹೈದರಾಬಾದ್'ನಿಂದ 50 ಕಿ.ಮೀ ದೂರದ ಹಕೀಂಪೇಟ್'ನಲ್ಲಿರುವ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಭಾರತೀಯ ಪ್ರಜೆ ಸಾವು

20 ವರ್ಷಗಳಿಂದ ಆತನನ್ನು ಕೊಲ್ಲಲು ಬಯಸಿದ್ದೆ: ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಿದ ಶೂಟರ್ ಹೇಳಿಕೆ!

ಮೊಟ್ಟೆ ಪ್ರಿಯರಿಗೆ ಗುಡ್‌ ನ್ಯೂಸ್‌; ಬೆಲೆಯಲ್ಲಿ ಭಾರೀ ಇಳಿಕೆ, ಗ್ರಾಹಕರು ಸಂತಸ

ಜಮ್ಮು: ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ, ಮದುವೆ ಮನೆಯಲ್ಲೇ ಗುಂಡಿನ ದಾಳಿ; ಡಿಸಿಎಂಗೆ ಗಾಯ

CM ಕುರ್ಚಿ ಕಸರತ್ತು: ಬಜೆಟ್ ಅಧಿವೇಶನ ಪೂರ್ಣಗೊಂಡ ಬಳಿಕ ನಾಯಕತ್ವ ಗೊಂದಲಕ್ಕೆ ‘ಹೈ’ ಪರಿಹಾರ..?

SCROLL FOR NEXT