ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಚೆನ್ನೈನಲ್ಲಿ ಅ. 5ರಿಂದ ಸಬ್ ಅರ್ಬನ್ ರೈಲು ಸೇವೆ ಆರಂಭ, ಆದರೆ ಅಗತ್ಯ ಸೇವೆ ಸಬ್ಬಂದಿಗೆ ಮಾತ್ರ

ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಅಕ್ಟೋಬರ್ 31ರ ವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಆದರೆ ಕೆಲವು ಅಗತ್ಯ ಸೇವೆಗಳಿಗೆ ವಿನಾಯ್ತಿ ನೀಡಿದ್ದು, ಇದೀಗ ಚೆನ್ನೈನಲ್ಲಿ ಅಗತ್ಯ ಸೇವಾ ಸಿಬ್ಬಂದಿಗಾಗಿ ಅಕ್ಟೋಬರ್ 5ರಿಂದ ಸಬ್ ಅರ್ಬನ್ ರೈಲು ಸೇವೆ ಆರಂಭಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 2 Oct 2020, 4:59 pm

ಚೆನ್ನೈ: ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಕಂಟೈನ್ ಮೆಂಟ್ ಜೋನ್ ಗಳಲ್ಲಿ ಅಕ್ಟೋಬರ್ 31ರ ವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಆದರೆ ಕೆಲವು ಅಗತ್ಯ ಸೇವೆಗಳಿಗೆ ವಿನಾಯ್ತಿ ನೀಡಿದ್ದು, ಇದೀಗ ಚೆನ್ನೈನಲ್ಲಿ ಅಗತ್ಯ ಸೇವಾ ಸಿಬ್ಬಂದಿಗಾಗಿ ಅಕ್ಟೋಬರ್ 5ರಿಂದ ಸಬ್ ಅರ್ಬನ್ ರೈಲು ಸೇವೆ ಆರಂಭಿಸಲಾಗುತ್ತಿದೆ.

ತಮಿಳುನಾಡು ಸರ್ಕಾರದ ಮನವಿ ಮೇರೆಗೆ ದಕ್ಷಿಣ ರೈಲ್ವೆ ನಿಯೋಜಿತ ಅಗತ್ಯ ಸೇವಾ ಸಿಬ್ಬಂದಿ ಪ್ರಯಾಣಿಸಲು ಸಬ್ ಅರ್ಬನ್ ರೈಲು ಆರಂಭಿಸಲು ನಿರ್ಧರಿಸಿದೆ.

ಸಬ್ ಅರ್ಬನ್ ರೈಲಿನಲ್ಲಿ ಪ್ರಯಾಣಿಸಲು ಸಾರ್ವಜನಿಕರಿಗೆ ಅವಕಾಶ ಇಲ್ಲ. ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಅಗತ್ಯ ಸೇವಾ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

Advertisement

Advertisement

ಅಕ್ಟೋಬರ್ 5ರಿಂದ ಸಂಚರಿಸುವ ಸಬ್ ಅರ್ಬನ್ ರೈಲುಗಳ ಮಾಹಿತಿಯನ್ನು ರೈಲ್ವೆ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement