ದೇಶ

ಮಾಧ್ಯಮಗಳ ಮುಂದೆ ಮಾತನಾಡಲು ಬಿಡುತ್ತಿಲ್ಲ: ಹತ್ರಾಸ್ ಸಂತ್ರಸ್ಥೆಯ ಕುಟುಂಬದವರ ಅಳಲು

Nagaraja AB

ಲಖನೌ: ಉತ್ತರ ಪ್ರದೇಶದಲ್ಲಿ ಹತ್ರಾಸ್ ನಲ್ಲಿ ನಡೆದ ಅಪ್ರಾಪ್ತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡೀ ರಾಷ್ಟ್ರದಾದ್ಯಂತ ಆಕ್ರೋಶಕ್ಕೆ ಗುರಿಯಾಗಿರುವಂತೆಯೇ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರ ಆಡಳಿತದ ಬಗ್ಗೆಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಹತ್ರಾಸ್ ಸಂತ್ರಸ್ಥೆಯ ಕುಟುಂಬ ಸದಸ್ಯರನ್ನು ಮಾಧ್ಯಮಗಳ ಜೊತೆಗೆ ಮಾತನಾಡಲು ಜಿಲ್ಲಾಡಳಿತ ಬಿಡುತ್ತಿಲ್ಲ. ಗ್ರಾಮದಲ್ಲಿ 144 ಸೆಕ್ಷನ್ ಜಾರಿಗೊಳಿಸುವ ಮೂಲಕ ಎಲ್ಲಾ ಆಯಾಮಗಳಿಂದ ಮಾಧ್ಯಮಗಳ ಮುಂದೆ ಮಾತನಾಡದಂತೆ ತಮ್ಮನ್ನು ಕಟ್ಟಿಹಾಕಲಾಗಿದೆ ಎಂದು ಹತ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಸಂತ್ರಸ್ಥೆಯ ಕುಟುಂಬದ ಸದಸ್ಯರು ದೂರಿದ್ದಾರೆ.

ಇಂದು ಬೆಳಿಗ್ಗೆ, ಸಂತ್ರಸ್ತೆಯ ಕುಟುಂಬ ಸದಸ್ಯರು ಅಪ್ರಾಪ್ತನೊಬ್ಬನನ್ನು ಹೇಗಾದರೂ ಮಾಧ್ಯಮಗಳಿಗೆ ತಲುಪಿಸುವಂತಹ ಕೆಲಸ ಮಾಡಿದ್ದಾರೆ. ತಮ್ಮ ಕುಟುಂಬ ಸದಸ್ಯರ ಮೊಬೈಲ್ ಫೋನ್ ಸ್ವೀಚ್ ಆಫ್ ಮಾಡಲು ಹೇಳಲಾಗಿದೆ.ಕೆಲವರ ಮೊಬೈಲ್ ಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಅಪ್ತಾಪ್ತ ಹೇಳಿದ್ದಾನೆ.

ಗ್ರಾಮದ ಪ್ರವೇಶದ್ವಾರದ ಹೊರಗೆ ಕಾಯುವ ಮಾಧ್ಯಮಗಳ ಬಳಿಗೆ ಕುಟುಂಬ ಸದಸ್ಯರು ತನ್ನನ್ನು ಕಳುಹಿಸಿದರು. ಹೊಲದ ಮೂಲಕ ಕೆಳಗೆ ಬಂದಿದ್ದೇನೆ.ಪೊಲೀಸರು ತಮ್ಮ ಕುಟುಂಬ ಸದಸ್ಯರನ್ನು ಹೊರಗೆ ಬರಲು ಬಿಡುತ್ತಿಲ್ಲ ಅಥವಾ ಮಾಧ್ಯಮದ ಜೊತೆಗೆ ಮಾತನಾಡಲು ಬಿಡುತ್ತಿಲ್ಲ,ಬೆದರಿಕೆ ಹಾಕುತ್ತಿದ್ದಾರೆ ಎಂದು ಅಪ್ರಾಪ್ತ ತಿಳಿಸಿದ್ದಾನೆ.

ಅಪ್ತಾಪ್ತ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಬಂದಿದ್ದಾರೆ. ಕೂಡಲೇ ಆ ಹುಡುಗ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಏಕೆ ಸಂತ್ರಸ್ಥೆಯ ಕುಟುಂಬವನ್ನು ಮಾಧ್ಯಮಗಳ ಜೊತೆಗೆ ಮಾತನಾಡಲು ಬಿಡುತ್ತಿಲ್ಲ ಎಂದು ಮಾಧ್ಯಮಗಳು ಕೇಳಿದಾಗ ಅಧಿಕಾರಿ ಮೌನ ವಹಿಸಿದ್ದಾನೆ.

ಉತ್ತರ ಪ್ರದೇಶದ ಕೆಲವೊಂದು ಪ್ರಮುಖವಾದ ಅಂಶಗಳು ದೇಶಾದ್ಯಂತ ಮುನ್ನೆಲೆಗೆ ಬರಲಿವೆ ಎಂಬ ಕಾರಣದಿಂದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹತ್ರಾಸ್ ಗ್ರಾಮದ ಒಳಗಡೆ ಮಾಧ್ಯಮದವರಿಗೆ ಅವಕಾಶ ನೀಡುತ್ತಿಲ್ಲ ಎಂದು ಉತ್ತರ ಪ್ರದೇಶ  ಕಾಂಗ್ರೆಸ್ ಆರೋಪಿಸಿದೆ.

SCROLL FOR NEXT