ದೇಶ

ಹತ್ರಾಸ್ ಗ್ಯಾಂಗ್ ರೇಪ್: ಅಮಿತ್ ಮಾಲ್ವಿಯಾ, ದಿಗ್ವಿಜಯ್ ಸಿಂಗ್, ಸ್ವರಾ ಭಾಸ್ಕರ್ ಗೆ ಎನ್‌ಸಿಡಬ್ಲ್ಯೂ ನೋಟಿಸ್

Lingaraj Badiger

ನವದೆಹಲಿ: ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಯುವತಿಯ ಗುರುತನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ನಟಿ ಸ್ವರಾ ಭಾಸ್ಕರ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿಡಬ್ಲ್ಯೂ) ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಬಗ್ಗೆ ವಿವರಣೆ ನೀಡಿ ಎಂದು ಈ ಮೂವರಿಗೆ ಸೂಚಿಸಿರುವ ಎನ್ ಸಿಡಬ್ಲ್ಯೂ, ತಕ್ಷಣವೇ ನಿಮ್ಮ ಪೋಸ್ಟ್ ಗಳನ್ನು ತೆಗೆದುಹಾಕಬೇಕು ಮತ್ತು ಭವಿಷ್ಯದಲ್ಲಿ ಅಂತಹ ಪೋಸ್ಟ್ ಗಳನ್ನು ಶೇರ್ ಮಾಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಟ್ವಿಟರ್ ನಲ್ಲಿ ಸಂತ್ರಸ್ತೆಯ ಫೋಟೋ ಶೇರ್ ಮಾಡಿದ ಅಮಿತ್ ಮಾಲ್ವಿಯಾ, ದಿಗ್ವಿಜಯ್ ಸಿಂಗ್, ಸ್ವರಾ ಭಾಸ್ಕರ್ ಅವರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲಾಗಿದೆ ಎಂದು ಎನ್ ಸಿಡಬ್ಲ್ಯು ಟ್ವೀಟ್ ಮೂಲಕ ತಿಳಿಸಿದೆ.

SCROLL FOR NEXT