ದೇಶ

88ನೇ ವಾಯುಸೇನಾ ದಿನ: ವೀರ ಯೋಧರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಶುಭಾಶಯ 

Manjula VN

ನವದೆಹಲಿ: 88ನೇ ವಾಯುಸೇನಾ ದಿನ ಹಿನ್ನಲೆಯಲ್ಲಿ ವಾಯುಪಡೆಯ ಧೀರ ಯೋಧರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಶುಭಾಶಯಗಳನ್ನು ಕೋರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ವಾಯುಪಡೆಯ ದಿನದಂದು ಭಾರತೀಯ ವಾಯುಸೇನೆಯಯ ಎಲ್ಲಾ ವೀರ ಯೋಧರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನೀವು ದೇಶದ ಆಗಸವನ್ನು ಸುರಕ್ಷಿತವಾಗಿರಿಸುವುದಲ್ಲದೆ, ವಿಪತ್ತು ಸಮಯದಲ್ಲಿ ಮಾನವೀಯತೆಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ. ಭಾರತಾಂಬೆ ರಕ್ಷಿಸಲು ನಿಮ್ಮ ಧೈರ್ಯ, ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ. 

ಇದರಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೂ ಕೂಡ ವೀರ ಯೋಧರಿಗೆ ಶುಭಾಶಗಳನ್ನು ಕೋರಿದ್ದು, ನಮ್ಮ ವಾಯುಪಡೆಯ ಯೋಧರು, ಮಾಜಿ ಯೋಧರು ಮತ್ತು ಭಾರತೀಯ ವಾಯುಪಡೆಯ ಕುಟುಂಬಸ್ಥರನ್ನು ನಾವು ಹೆಮ್ಮೆಯಿಂದ ಗೌರವಿಸುತ್ತೇವೆ. ನಮ್ಮ ಆಕಾಶವನ್ನು ಭದ್ರಪಡಿಸುವಲ್ಲಿ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಲ್ಲಿ ನಾಗರಿಕರಿಗೆ ಸಹಾಯ ಮಾಡುವಲ್ಲಿ ಐಎಎಫ್‌ನ ಕೊಡುಗೆ ಅಪಾರವಾದದು ಎಂದು ಹೇಳಿದ್ದಾರೆ.

SCROLL FOR NEXT