ದೇಶ

ಪೊಲೀಸರ ಲಾಠಿ, ಅಶ್ರುವಾಯುವಿನಿಂದ ಬಿಜೆಪಿ ವಿಸ್ತರಣೆ ತಡೆಯುವಲ್ಲಿ ಮಮತಾ ಯಶಸ್ವಿ ಆಗಲ್ಲ: ರವಿಶಂಕರ್ ಪ್ರಸಾದ್ 

Nagaraja AB

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆ ಇದೀಗ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವಣ ಕೆಸರೆರಾಚಟಕ್ಕೆ ಕಾರಣವಾಗಿದೆ.

ಬಂಗಾಳ ಪೊಲೀಸರಿಂದ ಪಕ್ಷದ ಹಿರಿಯ ಮುಖಂಡರ ಮೇಲಿನ ಬರ್ಬರ ರೀತಿಯನ್ನು ಹಲ್ಲೆಯನ್ನು ಬಲವಾಗಿ ಖಂಡಿಸುವುದಾಗಿ ಹೇಳಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಪೊಲೀಸರ ಲಾಠಿ, ಅಶ್ರುವಾಯು ಬಳಸುವ ಮೂಲಕ ಬಿಜೆಪಿಯ ವಿಸ್ತರಣೆಯನ್ನು ತಡೆಯುವಲ್ಲಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಯಶಸ್ವಿ ಆಗಲ್ಲ ಎಂದರು.

ಸುಮಾರು 1500 ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು, ರಾಸಾಯನಿಕ ಮಿಶ್ರಿತ ಅಶ್ರುವಾಯುವಿನ ಕಾರಣ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುವುದು, ದೇಶಿ ನಿರ್ಮಿತ ಬಾಂಬ್ ಎಸೆಯುವುದು, ಅಶ್ರುವಾಯು ಸಿಡಿಸುವುದು ಮಮತಾ ಬ್ಯಾನರ್ಜಿ ಅವರ ಹತಾಸೆಯನ್ನು ತೋರಿಸುತ್ತದೆ. ಏಕೆಂದರೆ, ಅಧಿಕಾರವಧಿ ಬಹು ದಿನ ಇರಲ್ಲ ಎಂಬುದು ಆಕೆಗೂ ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ .ಪಿ. ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT