ದೇಶ

ಭಾರತ್ ಮಾಲ ಪರಿಯೋಜನೆ'ಯಡಿ 2,921 ಕಿ.ಮೀ ರಸ್ತೆ ನಿರ್ಮಾಣ

Nagaraja AB

ನವದೆಹಲಿ: 'ಭಾರತ್‍ಮಾಲ ಪರಿಯೋಜನೆ'ಯಡಿ  ಮಂಜೂರಾದ 322 ಯೋಜನೆಗಳಲ್ಲಿ 12,413 ಕಿ.ಮೀ ಉದ್ದದ ರಸ್ತೆಗಳ ಪೈಕಿ 2,921 ಕಿ.ಮೀ ಉದ್ದದ ರಸ್ತೆಗಳನ್ನು ಕಳೆದ ಆಗಸ್ಟ್ ವರೆಗೆ ನಿರ್ಮಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಜಾಲದ ವಿವರವಾದ ಪರಿಶೀಲನೆ ಕೈಗೊಂಡಿರುವ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 5,35,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 34,800 ಕಿ.ಮೀ ರಸ್ತೆಗಳ ಅಭಿವೃದ್ಧಿಯನ್ನು ‘ಭಾರತ್‍ಮಾಲ ಪರಿಯೋಜನೆ’ಯ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.   

‘ಭಾರತ್‍ಮಾಲ ಪರಿಯೋಜನೆ’ಯು ರಸ್ತೆ ಮಾರ್ಗಗಳ ಅಭಿವೃದ್ಧಿ, ರಾಷ್ಟ್ರೀಯ ಕಾರಿಡಾರ್ ದಕ್ಷತೆಯ ಸುಧಾರಣೆ, ಗಡಿ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ರಸ್ತೆಗಳು, ಕರಾವಳಿ ಮತ್ತು ಬಂದರು ಸಂಪರ್ಕ ರಸ್ತೆಗಳು ಮತ್ತು ಹಸಿರು-ವಲಯ ಎಕ್ಸ್‌ಪ್ರೆಸ್ ಹೆದ್ದಾರಿಗಳು, ಫೀಡರ್ ಮಾರ್ಗಗಳು ಸೇರಿದಂತೆ ಹೆದ್ದಾರಿಗಳ ನಿರ್ಮಾಣಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಹೇಳಿದೆ.

ದೇಶಾದ್ಯಂತ ಸರಕು ಮತ್ತು ಪ್ರಯಾಣಿಕ ಸಾರಿಗೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಹೆದ್ದಾರಿ ವಲಯಕ್ಕಾಗಿ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.

SCROLL FOR NEXT