ದೇಶ

ಟಿಆರ್ ಪಿ ಹಗರಣ: ಬಿಎಆರ್ ಸಿ ಬಳಿ ವರದಿ ಕೇಳಿದ ಪ್ರಸಾರ ಖಾತೆ ಸಚಿವಾಲಯ

Sumana Upadhyaya

ನವದೆಹಲಿ: ಸುದ್ದಿ ವಾಹಿನಿಗಳ ರ್ಯಾಂಕಿಂಗ್ ನಲ್ಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್(ಟಿಆರ್ ಪಿ)ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ(ಬಿಎಆರ್ ಸಿ)ಯಿಂದ ವರದಿ ಕೇಳಿದೆ.

ದೂರದರ್ಶನ ವಾಹಿನಿಗಳಿಗೆ ರೇಟಿಂಗ್ ನೀಡುವ ಸಂಸ್ಥೆ ಬಿಎಆರ್ ಸಿಯಾಗಿದ್ದು, ಈ ಸಂಬಂಧ ಸಚಿವಾಲಯ ಮೊನ್ನೆ ಶುಕ್ರವಾರ ಪತ್ರ ಬರೆದಿದೆ. ಅದಕ್ಕೆ ನಾಳೆ ಮಂಡಳಿ ವರದಿ ಸಲ್ಲಿಸುವ ಸಾಧ್ಯತೆಯಿದೆ. ವರದಿ ನೋಡಿಕೊಂಡು ಪ್ರಸಾರ ಖಾತೆ ಸಚಿವಾಲಯ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಆರ್ ಸಿ ವರದಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮುಂಬೈಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಪಟ್ಟಂತೆ ನಾವು ರ್ಯಾಂಕಿಂಗ್ ನ್ನು ಕೇಳಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಬಿಎಆರ್ ಸಿಯನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗಳು ಸಂಪರ್ಕಿಸಿ ಕೇಳಿದಾಗ, ಅದು ಇ-ಮೇಲ್ ನಲ್ಲಿ ಪ್ರತಿಕ್ರಿಯಿಸಿದ್ದು, ಬಿಎಆರ್ ಸಿ ಮತ್ತು ಪ್ರಸಾರ ಸಚಿವಾಲಯಗಳ ನಡುವೆ ದಿನಂಪ್ರತಿ ಆಧಾರದಲ್ಲಿ ಮಾಹಿತಿ ವಿನಿಮಯಗಳು ಆಗುತ್ತಿರುತ್ತವೆ. ನಾವು ಸಚಿವಾಲಯದ ಜೊತೆಗೆ ಅಂದಂದಿನ ಸುದ್ದಿಗಳನ್ನು ವಿನಿಮಯ ಮಾಡುತ್ತಿರುತ್ತೇವೆ ಎಂದು ಹೇಳಿದೆ.

2014ರ ಜನವರಿಯಲ್ಲಿ ಪ್ರಸಾರ ಸಚಿವಾಲಯ ಟೆಲಿವಿಷನ್ ರೇಟಿಂಗ್ ಸಂಸ್ಥೆಗಳಿಗೆ ಮಾರ್ಗಸೂಚಿ ನಿಯಮಗಳಿಗೆ ಅಧಿಸೂಚನೆ ಹೊರಡಿಸಿ 2015ರಲ್ಲಿ ಬಿಎಆರ್ ಸಿಗೆ ಟೆಲಿವಿಷನ್ ರೇಟಿಂಗ್ಸ್ ನೀಡುವ ಅಧಿಕಾರವನ್ನು ನೀಡಿತ್ತು. ಬಿಎಆರ್ ಸಿ ವಾರಕ್ಕೊಮ್ಮೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಗಳನ್ನು ಬಿಡುಗಡೆ ಮಾಡುತ್ತದೆ.

SCROLL FOR NEXT