ದೇಶ

ಹತ್ರಾಸ್‌ ಪ್ರಕರಣ: ಸರ್ಕಾರದ ನಡವಳಿಗೆ ಅನೈತಿಕ, ಅಮಾನವೀಯ- ರಾಹುಲ್‌ ಗಾಂಧಿ

Lingaraj Badiger

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್‌ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, ರಾಜ್ಯ ಸರ್ಕಾರದ ವರ್ತನೆ ಅನೈತಿಕ ಮತ್ತು ಅಮಾನವೀಯ ಎಂದಿದ್ದಾರೆ.

ಮಹಿಳಾ ಸುರಕ್ಷತೆ ಕುರಿತ ಡಿಜಿಟಲ್‌ ಅಭಿಯಾನದ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಸಂತ್ರಸ್ತರಿಗೆ ನ್ಯಾಯ ಒದಗಿಸುವ ಬದಲು, ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ನಾನು ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದಾಗ ಇದು ನನಗೆ ಸ್ಪಷ್ಟವಾಗಿದೆ' ಎಂದಿದ್ದಾರೆ.

ಸರ್ಕಾರದ ಕೆಲಸ ಆರೋಪಿಗಳನ್ನು ಮತ್ತು ಅಪರಾಧಿಗಳನ್ನು ರಕ್ಷಿಸುವುದಲ್ಲ. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಆರೋಪಿಗಳಿಗೆ ಶಿಕ್ಷೆ ನೀಡುವುದು ಅವರ ಕೆಲಸ. ಹತ್ರಾಸ್ ಘಟನೆಯಲ್ಲಿ ರಾಜ್ಯ ಸರ್ಕಾರದ ವರ್ತನೆ ಅಮಾನವೀಯ ಮತ್ತು ಅನೈತಿಕವಾಗಿದೆ'' ಎಂದಿದ್ದಾರೆ.

ನಾವೆಲ್ಲರೂ ಸರ್ಕಾರದ ಮೇಲೆ ಒತ್ತಡ ಹೇರಬೇಕು ಮತ್ತು ಸಮಾಜವನ್ನು ಬದಲಿಸಲು ಸಹಾಯ ಮಾಡಬೇಕು ಎಂದು ಕರೆ ನೀಡಿರುವ ರಾಹುಲ್ ಗಾಂಧಿ. ದೇಶದ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT