ದೇಶ

ಭಾರತದಲ್ಲಿ ಮೂವರಿಗೆ ಕೋವಿಡ್-19 ಮರುಕಳಿಸಿದೆ: ಐಸಿಎಂಆರ್ 

Srinivas Rao BV

ನವದೆಹಲಿ: ಕೊರೋನಾ ಪ್ರಕರಣಗಳ ಏರಿಳಿತದ ನಡುವೆ ಹೊಸ ಆತಂಕ ಮೂಡಿದ್ದು ಮೂವರಿಗೆ ಕೋವಿಡ್-19 ಸೋಂಕು ಮರುಕಳಿಸಿದೆ. 

ಒಂದು ಸಮಯದಲ್ಲಿ ಕೋವಿಡ್-19 ಹಾಟ್ ಸ್ಪಾಟ್ ಎಂದೇ ಗುರುತಿಸಿಕೊಂಡಿದ್ದ ಮುಂಬೈ ನಲ್ಲಿ ಎರಡು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು ಮರುಕಳಿಸಿದ್ದು, ಅಹ್ಮದಾಬಾದ್ ನಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಐಸಿಎಂಆರ್ ತಿಳಿಸಿದೆ. 

ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ಕೋವಿಡ್-19 ಸೋಂಕು ಮರುಕಳಿಸುವುದೇ ಆದಲ್ಲಿ ಚೇತರಿಕೆ ಕಂಡ 100 ದಿನಗಳಲ್ಲಿ ಮರುಕಳಿಸುತ್ತದೆ.  ಕೆಲವು ಅಧ್ಯಯನಗಳ ಪ್ರಕಾರ ಪ್ರತಿಕಾಯಗಳು ನಾಲ್ಕು ತಿಂಗಳವರೆಗೆ ಜೀವ ಹೊಂದಿರುತ್ತವೆ ಎಂದು ಹೇಳಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯಿಂದ ನಾವು ಕೆಲವು ಡೇಟಾಗಳನ್ನು ಪಡೆದಿದ್ದೇವೆ, ವಿಶ್ವದಲ್ಲಿ ಈ ವರೆಗೂ 12 ಕ್ಕೂ ಹೆಚ್ಚು ಕೋವಿಡ್-19 ಮರುಕಳಿಸಿದ ಪ್ರಕರಣಗಳು ವರದಿಯಾಗಿದೆ.  ಈಗ ಭಾರತದಲ್ಲಿ ಕೋವಿಡ್-19 ಸೋಂಕು ಮರುಕಳಿಸಿರುವವರ ಬಗ್ಗೆ ದತ್ತಾಂಶ ಸಂಗ್ರಹಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

ಮರುಕಳಿಸುವ ಅವಧಿ 90 ದಿನಗಳೋ, 100 ದಿನಗಳೋ ಅಥವಾ 110 ದಿನಗಳೋ ಎಂಬ ಬಗ್ಗೆ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಭಾರತದಲ್ಲಿ ನಾವು 100 ದಿನಗಳೆಂದು ಪರಿಗಣಿಸಿದ್ದೇವೆ ಎಂದು ಭಾರ್ಗವ ತಿಳಿಸಿದ್ದಾರೆ. 

SCROLL FOR NEXT