ಅಕ್ಕಿಥಮ್ ಅಚ್ಯುತನ್ ನಂಬೂದಿರಿ 
ದೇಶ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ನಿಧನ

ಮಲಯಾಳಂ ಸಾಹಿತ್ಯದ ಸರಳತೆಯ ಮೇರು  ಪ್ರಖ್ಯಾತ ಕವಿ ಅಕ್ಕಿಥಮ್ ಎಂದೇ ಖ್ಯಾತರಾದ ಜ್ಞಾನಪೀಠ  ಪ್ರಶಸ್ತಿ ವಿಜೇತ ಅಕ್ಕಿಥಮ್ ಅಚ್ಯುತನ್ ನಂಬೂದರಿ(94) ವಯೋಸಹಜ ಕಾಯಿಲೆಗಳಿಂದ ಗಿ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಪಾಲಕ್ಕಾಡ್: ಮಲಯಾಳಂ ಸಾಹಿತ್ಯದ ಸರಳತೆಯ ಮೇರು  ಪ್ರಖ್ಯಾತ ಕವಿ ಅಕ್ಕಿಥಮ್ ಎಂದೇ ಖ್ಯಾತರಾದ ಜ್ಞಾನಪೀಠ  ಪ್ರಶಸ್ತಿ ವಿಜೇತ ಅಕ್ಕಿಥಮ್ ಅಚ್ಯುತನ್ ನಂಬೂದರಿ(94) ವಯೋಸಹಜ ಕಾಯಿಲೆಗಳಿಂದ ಗಿ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಅಕ್ಕಿಥಮ್ ಅವರ ಪತ್ನಿ 2019 ರಲ್ಲಿನಿಧನರಾಗಿದ್ದರು. 

ಮಲಯಾಳಂನ ಪ್ರಸಿದ್ಧ ಸಾಹಿತ್ಯ ಪ್ರತಿಭೆಯಾಗಿದ್ದ ಅಕ್ಕಿಥಮ್ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು.

ಸರಳ ಮತ್ತು ಸ್ಪಷ್ಟವಾದ ಬರವಣಿಗೆಗೆ ಹೆಸರುವಾಸಿಯಾದ ಮಲಯಾಳಂನ ಕವಿ ಮತ್ತು ಪ್ರಬಂಧಕಾರ ಅಕ್ಕಿಥಮ್ ಅವರಿಗೆ  2019 ರ ಸಾಲಿನ ಜ್ಞಾನಪೀತ್ ಪ್ರಶಸ್ತಿ  ಒಲಿದಿತ್ತು.

ಸೆಪ್ಟೆಂಬರ್ 24 ರಂದು ಕೇರಳದ ಪಾಲಕ್ಕಾಡ್ ನಲ್ಲಿರುವ  ಕುಮಾರನಲ್ಲೂರು ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.

ಅಕ್ಕಿಥಮ್ ಅವರ ಸಾಹಿತ್ಯ ಕೃತಿಗಳು 1950 ರ ಹಿಂದಿನ ದಿನಗಳಿಂದಲೂ ಪ್ರಕಟವಾಗಿತ್ತಿದ್ದವು. ಅಂದಿನಿಂದ ಅವರ ಕೃತಿಗಳು ಅವರಿಗೆ ಮನ್ನಣೆಯನ್ನು ತಂದುಕೊಟ್ಟವು, ಕ್ರಮೇಣ ಅವರನ್ನು ಮಲಯಾಳಂ ಸಾಹಿತ್ಯದಲ್ಲಿ ಒಬ್ಬ ಶ್ರೇಷ್ಠ  ಬರಹಗಾರನನ್ನಾಗಿಸಿತ್ತು. ಕೇರಳ ಸರಕಾರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ 'ಎಳಥುಚಾನ್  ಪ್ರಶಸ್ತಿ, ಭಾರತ ಸರ್ಕಾರದ "ಪದ್ಮಶ್ರೀ" ಪುರಸ್ಕಾರ ಸಹ ಇವರಿಗೆ ಸಂದಿದೆ.

ಅಕ್ಕಿಥಮ್  ಅವರು 'ಕೇರಳ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ, 'ಒಡಕ್ಕುಳಾಲ್' ಪ್ರಶಸ್ತಿ, 'ವಲ್ಲಥೋ' ಪ್ರಶಸ್ತಿ, 'ವಯಲಾರ್' ಪ್ರಶಸ್ತಿ, 'ಆಸಾನ್' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಆರೋಪ: ಶಾಲಿನಿ ರಜನೀಶ್​​ ಕ್ಷಮೆ ಕೇಳಿದ ಸ್ನೇಹಮಯಿ; ವಿಚಾರಣೆ ಬಳಿಕ ಉಲ್ಟಾ ಹೊಡೆದ ಸಾಮಾಜಿಕ ಕಾರ್ಯಕರ್ತ!

ಲೈಂಗಿಕ ದೌರ್ಜನ್ಯ ಕೇಸ್: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIR ದಾಖಲಿಸಲು Pocso ಕೋರ್ಟ್ ಮಹತ್ವದ ಆದೇಶ

ರಾಹುಲ್ ಗಾಂಧಿಗೆ ಸವಾಲು ಹಾಕಿದ ಅಮಿತ್ ಶಾ! ಯಾಕೆ ಗೊತ್ತಾ?

ಲಂಚ ಆರೋಪ: ಸ್ನೇಹಮಯಿ ಕೃಷ್ಣಗೆ ನಕಲಿ ಆಡಿಯೋ ನೀಡಿದ್ದ ವ್ಯಕ್ತಿಯ ಬಂಧನ

5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!

SCROLL FOR NEXT