ರಾಹುಲ್ ಗಾಂಧಿಗೆ ಸವಾಲು ಹಾಕಿದ ಅಮಿತ್ ಶಾ! ಯಾಕೆ ಗೊತ್ತಾ?

ನುಸುಳುಕೋರರನ್ನು ಹೊರಹಾಕಲು ಕಾಂಗ್ರೆಸ್ ಬದ್ಧವಾಗಿದ್ದರೆ ಅದನ್ನು ತನ್ನ ಪ್ರಣಾಳಿಕೆಯಲ್ಲಿ ನಮೂದಿಸಲಿ ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಅಸ್ಸಾಂ ಪೂರ್ವ ಮತ್ತು ಈಶಾನ್ಯ ಭಾರತದ ಕೈಗಾರಿಕಾ ಕೇಂದ್ರವಾಗಲಿದೆ ಎಂದು ಹೇಳಿದರು.
Amitsha and Rahul Gandhi
ಅಮಿತ್ ಶಾ, ರಾಹುಲ್ ಗಾಂಧಿ ಸಾಂದರ್ಭಿಕ ಚಿತ್ರ
Updated on

ಅಸ್ಸಾಂ: ಭಾರತವನ್ನು ನಕ್ಸಲರಿಂದ ಮುಕ್ತಗೊಳಿಸಿದರೆ, ನುಸುಳುಕೋರರಿಂದಲೂ ಮುಕ್ತವಾಗಿಸಬಹುದು ಎಂದು ಪ್ರತಿಪಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಮಾತ್ರವಲ್ಲದೆ ದೇಶದಿಂದ ಹೊರಹಾಕಲಾಗುವುದು ಎಂದು ಶನಿವಾರ ಹೇಳಿದ್ದಾರೆ.

ಅಸ್ಸಾಂ ಪೊಲೀಸ್ 10ನೇ ಬೆಟಾಲಿಯನ್‌ನ ಹೊಸ ಕ್ಯಾಂಪಸ್‌ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಮಿತ್ ಶಾ, ಒಳನುಸುಳುಕೋರರಿಂದ ಅತಿಕ್ರಮಣದಿಂದ ಮುಕ್ತವಾದ ಭೂಮಿಯಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಆದರೆ, ನುಸುಳುಕೋರರನ್ನು ಅತಿಕ್ರಮಣ ಭೂಮಿಯಿಂದ ಹೊರಹಾಕಲು ಸಾಕಾಗುವುದಿಲ್ಲ, ಅವರು ಬೇರೆಡೆಗೆ ಹೋಗಿ ನೆಲೆಸುತ್ತಾರೆ. ಅವರನ್ನು ದೇಶದಿಂದ ತೆಗೆದುಹಾಕಬೇಕು ಎಂದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಒಳನುಸುಳುಕೋರರನ್ನು ದೇಶದಿಂದ ಹೊರಹಾಕುವುದಾಗಿ ಈ ಹಿಂದೆ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಅಕ್ರಮ ವಲಸಿಗರು ಅದರ ಮತಬ್ಯಾಂಕ್ ಆಗಿರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ. ನುಸುಳುಕೋರರನ್ನು ರಕ್ಷಿಸುವ ಕಾಂಗ್ರೆಸ್ ನೀತಿಯು ಅಸ್ಸಾಂನ 'ಜಾತಿ' (ಜನರು), 'ಮತಿ' (ಭೂಮಿ) ಮತ್ತು ಭೀತಿ (ಭದ್ರತೆಗೆ) ಬೆದರಿಕೆ ಹಾಕಿದೆ ಎಂದು ಹೇಳಿದರು.

Amitsha and Rahul Gandhi
ವಿರೋಧ ಪಕ್ಷದ ನಾಯಕನಾಗಲು ರಾಹುಲ್ ಗಾಂಧಿ ನಾಲಾಯಕ್: ಶ್ರೀಕಾಂತ್ ಶಿಂಧೆ

ನುಸುಳುಕೋರರನ್ನು ಹೊರಹಾಕಲು ಕಾಂಗ್ರೆಸ್ ಬದ್ಧವಾಗಿದ್ದರೆ ಅದನ್ನು ತನ್ನ ಪ್ರಣಾಳಿಕೆಯಲ್ಲಿ ನಮೂದಿಸಲಿ ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಅಸ್ಸಾಂ ಪೂರ್ವ ಮತ್ತು ಈಶಾನ್ಯ ಭಾರತದ ಕೈಗಾರಿಕಾ ಕೇಂದ್ರವಾಗಲಿದೆ ಎಂದು ಹೇಳಿದರು.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮಾರ್ಚ್-ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com