ದೇಶ

ಬಿಗ್ ಬಜೆಟ್ ಚಿತ್ರಗಳಿಗೆ ಕಂಟಕವಾಗಿದ್ದ ತಮಿಳ್ ರಾಕರ್ಸ್ ವೆಬ್ ಸೈಟ್ ಬ್ಲಾಕ್, ಪುನರಾಗಮನದ ನಿರೀಕ್ಷೆಯಲ್ಲಿ ನೆಟಿಗರು!

Vishwanath S

ನವದೆಹಲಿ: ಚಿತ್ರ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದ್ದ ತಮಿಳ್ ರಾಕರ್ಸ್ ವೆಬ್ ಸೈಟ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ ಎಂದು ವರದಿಯಾಗಿದ್ದು, ವೆಬ್ ಸೈಟ್ ಮತ್ತೆ ಪುನರಾಗಮನದ ನಿರೀಕ್ಷೆಯಲ್ಲಿ ನೆಟಿಗರಿದ್ದಾರೆ. 

ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್(ಡಿಎಂಸಿಎ)ಗೆ ಅಮೆಜಾನ್ ಇಂಟರ್ ನ್ಯಾಷನಲ್ ಈ ಪೈರಸಿ ವೆಬ್ ಸೈಟ್ ವಿರುದ್ಧ ಹಲವು ಬಾರಿ ವರದಿ ಸಲ್ಲಿಸ್ತತು. ಈ ಕಾರಣದಿಂದ ಪೈರಸಿ ವೆಬ್ ಸೈಟ್ ಅನ್ನು ಅಂತರ್ಜಾಲ ನಿರ್ದಿಷ್ಟ ಹೆಸರು ಮತ್ತು ಸಂಖ್ಯೆಯ ಕಾರ್ಪೋರೇಷನ್ ನೋಂದಾವಣೆಯಿಂದ ತೆಗೆದುಹಾಕಲಾಗಿದೆ. 

ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲಯಾಳಂ ಸೇರಿದಂತೆ ಇತರ ಭಾಷೆಗಳ ಚಿತ್ರಗಳು ಬಿಡುಗಡೆಯಾದ ಮರುದಿನವೇ ತಮಿಳ್ ರಾಕರ್ಸ್ ತನ್ನ ವೆಬ್ ಸೈಟ್ ನಲ್ಲಿ ಎಚ್ ಡಿ ಫ್ರಿಂಟ್ ಚಿತ್ರಗಳ ಪೈರಸಿ ಬಿಡುಗಡೆ ಮಾಡುತ್ತಿತ್ತು. ಇನ್ನು ತಮ್ಮ ಲಿಂಕ್ ಸಿಗದಂತೆ ಸೈಟಿನ ಡೊಮೇನ್ ಅನ್ನು ಹೊಸ ಲಿಂಕ್ ಗೆ ಪದೇ ಪದೇ ಬದಲಾಯಿಸುತ್ತಾ ಇಷ್ಟು ದಿನ ಅಕ್ರಮವಾಗಿ ಪೈರಸಿ ಮಾಡುತ್ತಾ ಬಂದಿತ್ತು. ಇದು ನಿರ್ಮಾಪಕರಿಗೆ ದೊಡ್ಡ ಹೊಡೆತ ನೀಡುತ್ತಿತ್ತು. 

ಭಾರತದ ಚಿತ್ರರಂಗದಲ್ಲೇ ಕಾಲಿವುಡ್ ಈ ವೆಬ್ ಸೈಟ್ ಹಾವಳಿಗೆ ಹೆಚ್ಚು ಬಲಿಯಾಗಿತ್ತು. ಆದರೆ ಈಗ ಐಸಿಎಎನ್ಎನ್ ತಮಿಳು ರಾಕರ್ಸ್ ಲಿಂಕ್ ಅನ್ನೇ ಕಿತ್ತು ಹಾಕಿದೆ.

SCROLL FOR NEXT