ದೇಶ

ಮಾನಸಿಕವಾಗಿ, ದೈಹಿಕವಾಗಿ ದಣಿದಿರುವ ನಿತೀಶ್ ಕುಮಾರ್ ಗೆ ಬಿಹಾರ ನಿರ್ವಹಣೆ ಸಾಧ್ಯವಿಲ್ಲ: ತೇಜಸ್ವಿ ಯಾದವ್

Shilpa D

ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾನಸಿಕವಾಗಿ ಹಾಗೂ ದೈಹಿಕವಾಗಿ ದಣಿದಿದ್ದು ಬಿಹಾರವನ್ನು ಸಮರ್ಥವಾಗಿ ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಮಹಾಘಟಬಂಧನದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ಬಿಹಾರ ನೈಸರ್ಗಿಕ ವಿಕೋಪ ಸಂಭವಿಸಿದಾಗ ಸಿಎಂ ನಿತೀಶ್ ಕುಮಾರ್ ಎಲ್ಲಿದ್ದರು  ಎಂದು ಎಲ್ಲರೂ ಪ್ರಶ್ನಿಸುತ್ತಿದ್ದರು ಎಂದು ಟೀಕಿಸಿದ್ದಾರೆ.

ಕಳೆದ 15 ವರ್ಷಗಳಲ್ಲಿ ಯಾವುದೇ ಉದ್ಯೋಗವಕಾಶ ಸೃಷ್ಟಿಯಾಗಿಲ್ಲ,  ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ವಲಸಿಗರ ಸಂಖ್ಯೆ ಹೆಚ್ಚಿದೆ, ಬಡತನದ ಪ್ರಮಾಣ ಮತ್ತಷ್ಟು ಏರಿಕೆಯಾಗುತ್ತಿದೆ, ಪರಿಸ್ಥಿತಿ ಹೀಗಿರುವಾಗ ಯಾವ ಆಧಾರದ ಮೇಲೆ ಅವರು ಮತ ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

50ನೇ ವಯಸ್ಸಿಗೆ ಸರ್ಕಾರಿ ನೌಕರರ ನಿವೃತ್ತಿ ನೋಟಿಫಿಕೇಷನ್ ರದ್ದು ಪಡಿಸುವುದಾಗಿ ಯಾದವ್ ತಿಳಿಸಿದ್ದಾರೆ. ಮತದಾರರಿಗೆ ಆರೋಗ್ಯ ವಿಮೆ ಮಾಡಿಸಿಕೊಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿ ತೇಜಸ್ವಿ ತಿಳಿಸಿದ್ದಾರೆ. 

SCROLL FOR NEXT