ದೇಶ

ನೇಪಾಳದ ಅನೇಕ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆ; ಭಾರತದ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ!

Vishwanath S

ನವದೆಹಲಿ: ಚೀನಾ ನೇಪಾಳದ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಚೀನಾ ಜೊತೆಗೆ ಹೊಂದಿಕೊಂಡಿರುವ ಏಳು ಗಡಿ ಜಿಲ್ಲೆಗಳಲ್ಲಿನ ಅನೇಕ ಪ್ರದೇಶಗಳನ್ನು ಚೀನಾ ಅತಿಕ್ರಮಿಸುವ ಮೂಲಕ ನೇಪಾಳಿ ಗಡಿಗಳನ್ನು ಮತ್ತಷ್ಟು ಭೂಸ್ವಾಹ ಮಾಡುತ್ತಿದೆ. "ನೇಪಾಳಿ ಕಮ್ಯುನಿಸ್ಟ್ ಪಾರ್ಟಿ(ಎನ್‌ಸಿಪಿ) ಚೀನೀ ಕಮ್ಯುನಿಸ್ಟ್ ಪಾರ್ಟಿ(ಸಿಸಿಪಿ)ಯ ವಿಸ್ತರಣಾ ಕಾರ್ಯಸೂಚಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದರಿಂದ ನಿಜವಾದ ಸನ್ನಿವೇಶವು ಕೆಟ್ಟದಾಗಿರಬಹುದು ಎಂದು ಆಂತರಿಕ ಗುಪ್ತಚರ ಸಂಸ್ಥೆ ವರದಿಯೊಂದು ತಿಳಿಸಿದೆ.

ನೇಪಾಳದ ಪ್ರಧಾನಿ ಕೆಪಿ ಶರ್ಮಾ ಒಲಿ ಅವರ ಮುಂದೆ ಭೂ ಕಬಳಿಸುವ ಪ್ರಯತ್ನವನ್ನು ನೇಪಾಳದ ಸರ್ವೆ ಇಲಾಖೆ ಫ್ಲ್ಯಾಗ್ ಮಾಡುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.

ಚೀನಾದ ಭೂ ಕಬಳಿಕೆಗೆ ನೇಪಾಳದ ದೋಲಖಾ, ಗೂರ್ಖಾ, ಡಾರ್ಚುಲಾ, ಹಮ್ಲಾ, ಸಿಂಧುಪಾಲ್‌ಚೌಕ್, ಸಂಖುವಸಭಾ ಮತ್ತು ರಸುವಾ ಸೇರಿವೆ ಎಂದು ಆಂತರಿಕ ವರದಿ ಹೇಳಿದೆ. ಈ ಹಿಂದೆ ಕೊರ್ಲಾಂಗ್‌ನ ಮೇಲ್ಭಾಗದಲ್ಲಿದ್ದ ದೋಲಖಾದ ಕೊರ್ಲಾಂಗ್ ಪ್ರದೇಶದಲ್ಲಿ ಗಡಿ ಸ್ತಂಭ ಸಂಖ್ಯೆ 57ನ್ನು ಕಿತ್ತು ಚೀನಾದ ಒಳಕ್ಕೆ ತಳ್ಳಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು 1,500 ಮೀಟರ್ ಒಳಬಂದಿದೆ. 

ದೋಲಖಾವನ್ನು ಹೋಲುವಂತೆ, ಚೀನಾವು ಗೂರ್ಖಾ ಜಿಲ್ಲೆಯಲ್ಲಿ ಬೌಂಡರಿ ಪಿಲ್ಲರ್ ಸಂಖ್ಯೆಗಳನ್ನು 35, 37 ಮತ್ತು 38 ಮತ್ತು ಸೋಲುಖುಂಬುವಿನ ನಂಪಾ ಭಂಜ್ಯಾಂಗ್‌ನಲ್ಲಿ ಬೌಂಡರಿ ಪಿಲ್ಲರ್ ಸಂಖ್ಯೆ 62 ಅನ್ನು ಸ್ಥಳಾಂತರಿಸಿದೆ ಎಂದು ವರದಿಯಲ್ಲಿ ತಿಳಿಸಿದೆ.

SCROLL FOR NEXT