ಪ್ರಧಾನಿ ಮೋದಿ 
ದೇಶ

ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

ತವರು ರಾಜ್ಯ ಗುಜರಾತ್ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಿದರು.

ಅಹ್ಮದಾಬಾದ್: ತವರು ರಾಜ್ಯ ಗುಜರಾತ್ ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಿದರು.

ಗುಜರಾತ್‌ನ ರೈತರಿಗಾಗಿ ‘ಕಿಸಾನ್ ಸೂರ್ಯೋದಯ ಯೋಜನೆ’, ಯು ಎನ್ ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ  ಮಾಡಿದರು.

ನೀರಾವರಿಗಾಗಿ ಹಗಲು ವೇಳೆ ವಿದ್ಯುತ್ ಸರಬರಾಜು ಮಾಡಲು ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದ ಗುಜರಾತ್ ಸರ್ಕಾರ ಇತ್ತೀಚೆಗೆ ‘ಕಿಸಾನ್ ಸೂರ್ಯೋದಯ ಯೋಜನೆ’ ಘೋಷಿಸಿತ್ತು. ಈ ಯೋಜನೆಯಡಿ ರೈತರ ಜಮೀನುಗಳಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ವಿದ್ಯುತ್ ಸರಬರಾಜು   ಮಾಡಲಾಗುತ್ತದೆ. ಯೋಜನೆಯ ಪ್ರಸರಣ ಮೂಲಸೌಕರ್ಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ 3,523 ಕೋಟಿ ರೂ.ನಿಗದಿಪಡಿಸಿದೆ. ಈ ಮಹತ್ತರ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಅಂತೆಯೇ ಯು ಎನ್ ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಹಾಗೂ ಅಹಮದಾಬಾದ್‍ ಸರ್ಕಾರಿ ಆಸ್ಪತ್ರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಟೆಲಿ-ಹೃದ್ರೋಗ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಯು ಎನ್ ಮೆಹ್ತಾ ಸಂಸ್ಥೆ ಇದೀಗ  ಹೃದಯಶಾಸ್ತ್ರದ ಭಾರತದ ಅತಿದೊಡ್ಡ ಆಸ್ಪತ್ರೆಯಾಗಲಿದೆ. ಜೊತೆಗೆ ವಿಶ್ವದರ್ಜೆಯ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ವಿಶ್ವದ ಆಯ್ದ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಲಿದೆ. 

ಬಳಿಕ ಪ್ರಧಾನಿ ಮೋದಿ ಗುಜರಾತ್ ನ ಗಿರ್ನಾರ್‌ನಲ್ಲಿನ ರೋಪ್‌ವೇಯನ್ನು ಉದ್ಘಾಟಿಸಿದರು. ಗಿರ್ನಾರ್‌ನಲ್ಲಿ ಪ್ರಧಾನ ಮಂತ್ರಿ ರೋಪ್‌ವೇ ಉದ್ಘಾಟಿಸುವುದರೊಂದಿಗೆ ಕಾರಣ ಗುಜರಾತ್ ಮತ್ತೊಮ್ಮೆ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಎದ್ದು ಕಾಣುವಂತಾಗಿದೆ. ಈ ರೋಪ್ ವೇ ನಲ್ಲಿ ಆರಂಭದಲ್ಲಿ 25-30  ಕ್ಯಾಬಿನ್‌ಗಳು ಇರಲಿದ್ದು, ಪ್ರತಿ ಕ್ಯಾಬಿನ್‌ ನಲ್ಲಿ 8 ಜನರು ಸಾಗುವ ಸಾಮರ್ಥ್ಯವಿದೆ. ರೋಪ್‍ ವೇ ಉದ್ದ 2.3 ಕಿ.ಮೀ ಆಗಿದೆ. ಒಂದು ಗಂಟೆಗೆ ಈ ರೋಪ್ ವೇ ಮೂಲಕ ಒಂದು ಸಾವಿರ ಮಂದಿಯನ್ನು ಸಾಗಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ನಿತಿನ್ ನಬೀನ್ ಭೇಟಿ ಬಳಿಕ BJP ನಾಯಕತ್ವ ಚರ್ಚೆ ಮತ್ತೆ ಮುನ್ನೆಲೆಗೆ: ವಿಜಯೇಂದ್ರ ಭವಿಷ್ಯ ಕುರಿತು ಹೆಚ್ಚಿದ ಕುತೂಹಲ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರ..!

ಬೆಂಗಳೂರು ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ಗಳೇ ಕಾರಣ? ‘Heat island’ ಪರಿಣಾಮ ಕುರಿತು ತಜ್ಞರ ಗಂಭೀರ ಎಚ್ಚರಿಕೆ..!

SIR ಹೆಸರಿನಲ್ಲಿ ಮತದಾರರ ಹೆಸರು ಡಿಲೀಟ್ ಆರೋಪ; war room ಸ್ಥಾಪಿಸಿದ ಕಾಂಗ್ರೆಸ್, ಎಚ್ಚರ ವಹಿಸುವಂತೆ 'ಕೈ' ನಾಯಕರಿಗೆ ಸಿದ್ದು-ಡಿಕೆಶಿ ಸೂಚನೆ

ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಹಿಂಭಾಗದಲ್ಲಿರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ..!

SCROLL FOR NEXT