ದೇಶ

ವಿಜಯ್ ಮಲ್ಯಾರ ಯುಬಿಹೆಚ್ಎಲ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Srinivas Rao BV

ವಿಜಯ್ ಮಲ್ಯಾರ ಯುನೈಟೆಡ್ ಬ್ರೆವರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಹೆಚ್ಎಲ್) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 

ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಬದಲಾಯಿಸಿ, ಕಿಂಗ್ ಫಿಷರ್ ಏರ್ಲೈನ್ಸ್ ಲಿಮಿಟೆಡ್ ನ ಸಾಲಗಳನ್ನು ಮರುಪಾವತಿ ಮಾಡುವುದಕ್ಕಾಗಿ ಯುಬಿಹೆಚ್ಎಲ್ ಕಂಪನಿಯನ್ನು ಮುಚ್ಚುವುದಕ್ಕೆ ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. 

ನ್ಯಾ. ಯುಯು ಲಲಿತ್ ಅವರಿದ್ದ ಸುಪ್ರೀಂ ಪೀಠ, ಯುಬಿಹೆಚ್ಎಲ್ ನ ಅರ್ಜಿಯನ್ನು ತಿರಸ್ಕರಿಸಿದ್ದು, ಯುಬಿ ಗ್ರೂಪ್ ನ 102 ವರ್ಷಗಳ ಮಾತೃಸಂಸ್ಥೆ ಮುಚ್ಚುವುದನ್ನು ತಡೆಗಟ್ಟಲಾಗಿದೆ.

ಎಸ್ ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟವನ್ನು ಪ್ರತಿನಿಧಿಸಿದ ಮುಕುಲ್ ರೋಹಟ್ಗಿ ಅವರು " ಈ ವರೆಗೂ 3,600 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಆದರೆ ಇನ್ನೂ 11,000 ಕೋಟಿ ರೂಪಾಯಿಗಳನ್ನು ಮಲ್ಯಾ ಹಾಗೂ ಯುಬಿಹೆಚ್ಎಲ್ ನಿಂದ ಪಡೆಯಬೇಕಿರುವುದು ಬಾಕಿ ಇದೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಇಡಿ, ವಿಜಯ್ ಮಲ್ಯಾ ಸಂಸ್ಥೆಗಳ ಆಸ್ತಿಗಳನ್ನು ವಶಕ್ಕೆ ಪಡೆಯಬಾರದಿತ್ತು, ಬ್ಯಾಂಕ್ ಗಳಿಗೆ ಅದರ ಮೇಲೆ ಹೆಚ್ಚು ಹಕ್ಕಿದೆ ಎಂದು ಹೇಳಿದ್ದಾರೆ.

SCROLL FOR NEXT