ದೇಶ

ಕಲ್ಲಿದ್ದಲು ಹಗರಣ: ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಶಿಕ್ಷೆ ಅಮಾನತು

Vishwanath S

ನವದೆಹಲಿ: ಕಲ್ಲಿದ್ದಲು ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರ ಜೈಲು ಶಿಕ್ಷೆ ಅವಧಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿದೆ.

ಕಲ್ಲಿದ್ದಲು ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರ 3 ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತು ಮಾಡಿದೆ. 

ಜಾರ್ಖಂಡ್ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಿಗೆ ದೆಹಲಿ ಸಿಬಿಐ ವಿಶೇಷ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಜಾರ್ಖಂಡ್‌ನ ಗಿರಿದಿಹ್ನಲ್ಲಿರುವ ಬ್ರಹ್ಮದಿಹಾ ಕಲ್ಲಿದ್ದಲು ಬ್ಯಾಕ್ ಅನ್ನು 1999ರಲ್ಲಿ ಕ್ಯಾಸ್ಪ್ಯಾನ್ ಟೆಕ್ನಾಲಜೀರ್ ಲಿಮೀಟಿಚ್‌ಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣ ಇದಾಗಿದೆ. ಜಾರ್ಖಂಡ್ ಕಲ್ಲಿದ್ದಲು ಗಣಿ ಮತ್ತು ನಿಕ್ಷೇಪಗಳ ಹಂಚಿಕೆಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದ ಅಕ್ರಮ ಮತ್ತು ಅವ್ಯವಹಾರ ನಡೆದಿತ್ತು  ಎಂದು ಆರೋಪಿಸಲಾಗಿತ್ತು.

SCROLL FOR NEXT