ದೇಶ

ನಾವು ಬೇರೆ ಪಕ್ಷ ಸೇರುವುದಿಲ್ಲ: ಅಮಾನತುಗೊಂಡ ಬಿಎಸ್ ಪಿ ಶಾಸಕರು

Lingaraj Badiger

ಲಖನೌ: ನಾವು ಬೇರೆ ಯಾವುದೇ ಪಕ್ಷಕ್ಕೆ ಸೇರುವ ಯೋಚನೆ ಇಲ್ಲ ಎಂದು ಬಿಎಸ್ ಪಿಯಿಂದ ಗುರುವಾರ ಅಮಾನತುಗೊಂಡ ಏಳು ಶಾಸಕರು ಹೇಳಿದ್ದಾರೆ.

ಪಕ್ಷದ ರಾಜ್ಯಸಭಾ ಅಭ್ಯರ್ಥಿ ರಾಮ್ ಜಿ ಗೌತಮ್ ಅವರನ್ನು ವಿರೋಧಿಸಿದ ಕಾರಣಕ್ಕಾಗಿ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಅವರು ಏಳು ಶಾಸಕರನ್ನು ಅಮಾನತುಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಮಾನಾತುಗೊಂಡ ಶಾಸಕರು, "ಪಕ್ಷದ ಅಧ್ಯಕ್ಷರಿಗೆ ನಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ. ಹೀಗಾಗಿ ಅವರು ತಮಗೆ ಅನಿಸಿದ್ದನ್ನು ಮಾಡಿದ್ದಾರೆ. ಆದರೆ ನಾವು ಬೇರೆ ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ" ಎಂದು ಬಂಡಾಯ ಶಾಸಕರದಲ್ಲಿ ಒಬ್ಬರಾದ ಅಸ್ಲಂ ರೈನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಏಕೈಕ ಅಭ್ಯರ್ಥಿಯ ಹೆಸರನ್ನು ಪ್ರಸ್ತಾಪಿಸಿದ್ದ 10 ಶಾಸಕರಲ್ಲಿ ನಾಲ್ವರು ಬೆಂಬಲ ಹಿಂತೆಗೆದುಕೊಳ್ಳುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ್ದರು. ಅಲ್ಲದೆ ಇತರ ಇಬ್ಬರು ಶಾಸಕರೊಂದಿಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಾಯಾವತಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಸ್ಲಂ ಅಲಿ, ಹರ್ಗೋವಿಂದ್ ಭಾರ್ಗವ, ಮೊಹಮ್ಮದ್ ಮುಸ್ತಫಾ ಸಿದ್ದಿಕಿ, ಹಕೀಮ್ ಲಾಲ್ ಬೈಂಡ್, ಮೊಹಮ್ಮದ್ ಅಸ್ಲಂ ರೈನಿ, ಸುಷ್ಮಾ ಪಟೇಲ್ ಮತ್ತು ವಂದನಾ ಸಿಂಗ್ ಅವರು ಅಮಾನತುಗೊಳಿಸಿದ್ದಾರೆ.

SCROLL FOR NEXT