ಚೀನಾದಲ್ಲಿ ಲಡಾಖ್, ಜಮ್ಮು ಮತ್ತು ಕಾಶ್ಮೀರ ನಕ್ಷೆ ವಿವಾದ: ಭಾರತದ ಕ್ಷಮೆ ಕೋರಿದ ಟ್ವಿಟರ್!
ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ.
ನವದೆಹಲಿ: ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ.
ಈ ಕುರಿತಂತೆ ಭಾರತದ ಜಂಟಿ ಸಂಸದೀಯ ಸಮಿತಿಗೆ ಟ್ವಿಟರ್ ಸಂಸ್ಥೆಯ ವಕ್ತಾರರು ಮೌಖಿಕ ಕ್ಷಮೆಯಾಚಿಸಿದ್ದು, ಲಿಖಿತ ಉತ್ತರದಲ್ಲಿ ಈ ಕ್ಷಮೆ ಕೋರಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಟ್ವಿಟ್ಟರ್ ವಕ್ತಾರರು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ದೇಶದ ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಅಂತೆಯೇ ಟ್ವಿಟರ್ ವಕ್ತಾರರು ಸಲ್ಲಿಕೆ ಮಾಡಿರುವ ಈ ಪತ್ರವನ್ನು ಜಂಟಿ ಸಂಸದೀಯ ಸಮಿತಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿತ್ತು. ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ಕೂಡ ನೀಡಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.