ಆರ್. ದೊರೈಕಣ್ಣು 
ದೇಶ

ಕೋವಿಡ್-19 ವೈರಸ್ ಗೆ ಬಲಿಯಾದ ತಮಿಳುನಾಡು ಕೃಷಿ ಸಚಿವ ಆರ್ . ದೊರೈಕ್ಕಣ್ಣು

ತಮಿಳುನಾಡು  ಕೃಷಿ ಸಚಿವ ಆರ್. ದೊರೈಕಣ್ಣು ಕೋವಿಡ್-19 ವೈರಸ್ ಗೆ ಬಲಿಯಾಗಿದ್ದಾರೆ. 72 ವರ್ಷದ ಆರ್.ದೊರೈಕಣ್ಣು ತೀವ್ರ ಉಸಿರಾಟದ ತೊಂದರೆ ಹಾಗೂ ಕೋವಿಡ್-19 ಪಾಸಿಟಿವ್ ಕಾರಣ ಅಕ್ಟೋಬರ್ 13 ರಂದು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.

ಚೆನ್ನೈ: ತಮಿಳುನಾಡು  ಕೃಷಿ ಸಚಿವ ಆರ್. ದೊರೈಕಣ್ಣು ಕೋವಿಡ್-19 ವೈರಸ್ ಗೆ ಬಲಿಯಾಗಿದ್ದಾರೆ. 72 ವರ್ಷದ ಆರ್.ದೊರೈಕಣ್ಣು ತೀವ್ರ ಉಸಿರಾಟದ ತೊಂದರೆ ಹಾಗೂ ಕೋವಿಡ್-19 ಪಾಸಿಟಿವ್ ಕಾರಣ ಅಕ್ಟೋಬರ್ 13 ರಂದು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.

ಸಚಿವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆ ಶನಿವಾರ ಮಧ್ಯಾಹ್ನ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿತ್ತು. ಗರಿಷ್ಠ  ಜೀವ ರಕ್ಷಕದ ಹೊರತಾಗಿಯೂ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ  ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಪ್ರಕಟಣೆಯಲ್ಲಿ  ತಿಳಿಸಿದ್ದರು.

ಸಿಟಿ ಸ್ಕ್ಯಾನ್ ನಲ್ಲಿ ಅವರ ಶೇ. 90 ರಷ್ಟು ಶ್ವಾಸಕೋಶಗಳು ಹಾಳಾಗಿರುವುದಾಗಿ ಅಕ್ಟೋಬರ್ 25 ರಂದು ಆಸ್ಪತ್ರೆ ತಿಳಿಸಿತ್ತು. ಅಂದೇ ಮುಖ್ಯಮಂತ್ರಿ ಪಳನಿಸ್ವಾಮಿ, ರಾಜ್ಯ ಸಚಿವ ಡಿ. ಜಯಕುಮಾರ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಆರ್. ದೊರೈಕಣ್ಣು ಅವರ ಆರೋಗ್ಯ ವಿಚಾರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Khamenei ಸತ್ತ... ಉತ್ತರಾಧಿಕಾರಿ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಇದು ಇರಾನ್ ಗೇ ಗೊತ್ತಿಲ್ಲ!

'ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ'.. 'ಉತ್ತರಿಸದಿದ್ದ ಮೇಲೆ ಅಧಿವೇಶನ ಏಕೆ ಕರೆಯಬೇಕು': ಸ್ಪೀಕರ್ UT Khader ಕಿಡಿ

ಹಾರ್ಮುಜ್ ಜಲಸಂಧಿ ಬಂದ್ ಮಾಡಿಲ್ಲ; ವಿಶ್ವ ನಾಯಕರು ಯುದ್ಧ ನಿಲ್ಲಿಸಲು ಅಮೆರಿಕ ಮೇಲೆ ಒತ್ತಡ ಹೇರಬೇಕು: ಇರಾನ್

SCROLL FOR NEXT