ದೇಶ

ಹೌದು ನಾನು ನಾಯಿ, ಸಾರ್ವಜನಿಕರು ನನ್ನ ಮಾಲೀಕರು- ಜ್ಯೋತಿರಾಧಿತ್ಯ ಸಿಂಧಿಯಾ

Nagaraja AB

ಭೂಪಾಲ್:  ಕಾಂಗ್ರೆಸ್ ಮುಖಂಡ ಕಮಲ್ ನಾಥ್ ನನ್ನನ್ನು ನಾಯಿ ಅಂತಾ ಕರೆದಿದ್ದಾರೆ ಎಂದು ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಶನಿವಾರ ಹೇಳುವ ಮೂಲಕ ಮಧ್ಯ ಪ್ರದೇಶ ಉಪ ಚುನಾವಣೆ ಪ್ರಚಾರ ಕಣ ಮತ್ತಷ್ಟು ತಾರಕಕ್ಕೇರಿತು. ಆದರೆ, ಈ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್, ಕಮಲ್ ನಾಥ್ ಈ ಪದವನ್ನು ಬಳಸಿಲ್ಲ ಎಂದು ಹೇಳಿದೆ.

ಭೂಪಾಲ್ ನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಸಾಡೊರಾದಲ್ಲಿ  ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಧಿಯಾ, ಹೌದು ಕಮಲ್ ನಾಥ್, ನಾನು ನಾಯಿ, ಸಾರ್ವಜನಿಕರು ನನ್ನ ಮಾಲೀಕರು. ಶ್ವಾನ ಮಾಲೀಕರನ್ನು ಸಂರಕ್ಷಿಸುತ್ತದೆ ಎಂದರು.

ಕಮಲ್ ನಾಥ್ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಂಧಿಯಾ ಅಥವಾ ಯಾವುದೇ ಮುಖಂಡರ ಕುರಿತು ಮಾಜಿ ಮುಖ್ಯಮಂತ್ರಿ ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಕಮಲ್ ನಾಥ್ ಮಾಧ್ಯಮ ಸಮನ್ವಯಾಧಿಕಾರಿ ಸಲೂಜಾ ಹೇಳಿದ್ದಾರೆ.

ಕಮಲ್ ನಾಥ್ ಇತ್ತೀಚಿಗೆ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿಯನ್ನು ಐಟಂ ಎಂದು ಕರೆದಿದ್ದರು. ಪದೇ ಪದೇ ಮಾದರಿ ನೀತಿ ಸಂಹಿತೆಯ  ಉಲ್ಲಂಘನೆಗಾಗಿ  ಚುನಾವಣಾ ಆಯೋಗ ಶುಕ್ರವಾರ ಕಮಲ್ ನಾಥ್  ಹೊಂದಿದ್ದ  ಸ್ಟಾರ್ ಪ್ರಚಾರಕ' ಸ್ಥಾನಮಾನವನ್ನು ರದ್ದುಪಡಿಸಿತು.ಮಧ್ಯಪ್ರದೇಶದ 28 ಸ್ಥಾನಗಳಿಗೆ ಉಪ ಚುನಾವಣೆ ನವೆಂಬರ್ 3 ರಂದು ನಡೆಯಲಿದೆ. 
 

SCROLL FOR NEXT