ದೇಶ

ಜಮ್ಮು ಕಾಶ್ಮೀರಕ್ಕಾಗಿ ನೀತಿಗಳ ರಚನೆಗೆ ನೈಜ ಪರಿಸ್ಥಿತಿ ಅರಿಯುವ ಪ್ರಯತ್ನ ಸಾಗಿದೆ; ನಿರ್ಮಲಾ ಸೀತಾರಾಮನ್

Srinivas Rao BV

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಪಟ್ಟ ನೀತಿಗಳನ್ನು ರಚಿಸುವ ಸಲುವಾಗಿ ಅಲ್ಲಿನ ನೈಜ ಪರಿಸ್ಥಿತಿಯನ್ನು ಅರಿಯಲು ಕೇಂದ್ರ ಸರ್ಕಾರ ಉತ್ಸುಕವಾಗಿವೆ ಎಂದು ಉನ್ನತ ಕೈಗಾರಿಕಾ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವೆಬಿನಾರ್ ಒಂದರಲ್ಲಿ ಮಾತನಾಡಿದ ಅವರು, ತಾವು ಉದ್ಯಮದ ಎಲ್ಲ ಪಾಲುದಾರರೊಂದಿಗೆ ಸಂವಹನ ನಡೆಸುತ್ತಿದ್ದೇವೆ ಮತ್ತು ಇದರಿಂದ ಸಾಕಷ್ಟು ಲಾಭಗಳಾಗಿವೆ. ಇದರ ಆಧಾರದ ಮೇಲೆ ನೀತಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದರು. 

ಅವನತಿಯ ಅಂಚಿನಲ್ಲಿರುವ ಉದ್ಯಮವನ್ನು ಉಳಿಸಲು ಕೇಂದ್ರವು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಇವುಗಳ ನಿವಾರಣೆಗೆ ಕೂಡ ಸರ್ಕಾರ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಚಿವರು ನಂತರ  ಜಮ್ಮು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಚರ್ಚಿಸಿದರು.

SCROLL FOR NEXT