ದೇಶ

ಪಿಎಂ-ಕೇರ್ಸ್ ಗೆ 5 ದಿನಗಳಲ್ಲಿ 3,076 ಕೋಟಿ ರೂಪಾಯಿ: ಹೆಸರು ಬಹಿರಂಗಪಡಿಸಲು ಚಿದಂಬರಂ ಆಗ್ರಹ  

Srinivas Rao BV

ಪಿಎಂ-ಕೇರ್ಸ್ ಗೆ 5 ದಿನಗಳಲ್ಲಿ 3,076 ಕೋಟಿ ಹರಿದುಬಂದಿದೆ. 2020 ನೇ ಆರ್ಥಿಕ ವರ್ಷಕ್ಕೆ ಸರ್ಕಾರದ ಆಡಿಟ್ ಬಹಿರಂಗಗೊಂಡಿದ್ದು, ಇದರಲ್ಲಿ ಮಾ.27-31 ವರೆಗೆ ಬಂದಿರುವ ದೇಣಿಗೆಗಳ ವಿವರವನ್ನು ಮಾತ್ರ ಬಹಿರಂಗಗೊಳಿಸಲಾಗಿದೆ. 

3,076 ಕೋಟಿರೂಪಾಯಿಗಳ ಪೈಕಿ 3,075.85 ಕೋಟಿ ರೂಪಾಯಿ ದೇಶದಲ್ಲೇ ಸ್ವಯಂಪ್ರೇರಿತರಾಗಿ ನೀಡಲಾಗಿದ್ದು, 39.67 ಲಕ್ಷ ವಿದೇಶಿ ದೇಣಿಗೆಯಾಗಿದೆ ಎಂದು ಆಡಿಟ್ ಸ್ಟೇಟ್ ಮೆಂಟ್ ನಿಂದ ತಿಳಿದುಬಂದಿದೆ. ಈ ಮಾಹಿತಿಯ ಪ್ರಕಾರ ಪ್ರಾರಂಭದಲ್ಲಿ ಪಿ-ಎಂ ಕೇರ್ಸ್ ನಲ್ಲಿ 2.25 ಲಕ್ಷ ರೂಪಾಯಿ ಪ್ರಾರಂಭಿಕ ದೇಣಿಗೆ ನೀಡಲಾಗಿತ್ತು. ಪಿಎಂ-ಕೇರ್ಸ್ ಗೆ 35 ಲಕ್ಷ ರೂಪಾಯಿಗಳಷ್ಟು ಬಡ್ಡಿಯೂ ದೊರೆತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಪಿಎಂ-ಕೇರ್ಸ್ ಫಂಡ್ ವೆಬ್ ಸೈಟ್ ನಲ್ಲಿ ಆಡಿಟ್ ನ ವಿವರಗಳನ್ನು ನೀಡಲಾಗಿದೆ. ಆದರೆ ಯಾರ್ಯಾರು ದಾನಿಗಳು ಪಿಎಂ-ಕೇರ್ಸ್ ಗೆ ಹಣ ನೀಡಿದ್ದಾರೆಂಬುದು ಬಹಿರಂಗವಾಗಿಲ್ಲ.

ಈ ವಿಷಯವಾಗಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಧ್ವನಿ ಎತ್ತಿದ್ದು, ಪಿಎಂ ಕೇರ್ಸ್ ವೆಬ್ ಸೈಟ್ ನಲ್ಲಿ ವಿವರಣೆ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ನಿರ್ದಿಷ್ಟ ಮೊತ್ತದ ಹಣ ಬಂದರೆ ಎನ್ ಜಿಒ ಹಾಗೂ ಟ್ರಸ್ಟ್ ಗಳೂ ಸಹ ಹಣ ಬಂದ ಮೂಲವನ್ನು ಬಹಿರಂಗಪಡಿಸಬೇಕು ಆದರೆ ಪಿಎಂ ಕೇರ್ಸ್ ಗೇಕೆ ಇದರಿಂದ ವಿನಾಯಿತಿ? ಎಂದು ಚಿದಂಬರಂ ಪ್ರಶ್ನಿಸಿದ್ದು, ಸರ್ಕಾರ ಹಣ ನೀಡಿದವರ ಹೆಸರು, ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

SCROLL FOR NEXT