ದೇಶ

'ನರೇಂದ್ರ ಮೋದಿಯವರನ್ನು ಕೊಲ್ಲಿ' ಹೀಗೆಂದು ಬಂತು ಬೆದರಿಕೆ ಇಮೇಲ್:ಪ್ರಧಾನಿಯವರ ಭದ್ರತೆ ಹೆಚ್ಚಿಸಿದ ಎನ್ ಐಎ

Sumana Upadhyaya

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಎಂದು ಇಮೇಲ್ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಗೆ ಇಮೇಲ್ ಬಂದಿದ್ದು, ಇದಾದ ಬಳಿಕ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಗುಪ್ತಚರ ಇಲಾಖೆಗಳ ಹಿರಿಯ ಪ್ರತಿನಿಧಿಗಳನ್ನು ಹೊಂದಿರುವ ಬಹು ಸಂಸ್ಥೆ ಸಮನ್ವಯ ಕೇಂದ್ರ(ಎಂಎಸಿ)ವನ್ನು ಸಂಪರ್ಕಿಸಿ ಇಮೇಲ್ ಎಲ್ಲಿಂದ ಬಂದಿರುವುದು, ಕಳುಹಿಸಿದವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದೆ.

ಕಳೆದ ಆಗಸ್ಟ್ 8ರಂದು 'ylalwani12345@gmail.com' ಎಂಬ ವಿಳಾಸದಿಂದ ಈ ಮೇಲ್ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಸ್ವತಂತ್ರವಾಗಿ ತನಿಖೆ ನಡೆಸದೆ ಅದನ್ನು ಕೇಂದ್ರ ತನಿಖಾ ಗುಪ್ತಚರ ಸಂಸ್ಥೆಗೆ ವರ್ಗಾಯಿಸಿದೆ.

ಪ್ರಾಥಮಿಕ ತನಿಖೆಯಿಂದ ಇದು ಭಾರತದ ಹೊರಗಿನಿಂದ ಬಂದಿರುವ ಇಮೇಲ್ ಎಂದು ತಿಳಿದುಬಂದಿದೆ.

SCROLL FOR NEXT