ಲಖಿಂಪುರ ಖೇರಿ: ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ.
ಮೂರು ವರ್ಷದ ಬಾಲಕಿ ಮೇಲಿನ ಅತ್ಯಚಾರ ಹಾಗೂ ಕೊಲೆ ಸೇರಿ 20 ದಿನಗಳೊಳಗೆ ಇದು ಮೂರನೇ ಘಟನೆಯಾಗಿದೆ ಈ ಜಿಲ್ಲೆಯಲ್ಲಿ ನಡೆದಿದೆ. ಬುಧವಾರದಿಂದ ಬಾಲಕಿ ನಾಪತ್ತೆಯಾಗಿದ್ದಳು, ಕುಟುಂಬದವರು ಹಾಗೂ ಊರಿನವರು ಸೇರಿ ಹುಡುಕಾಟ ನಡೆಸಿದ್ದಾರೆ.
ಬಳಿಕ ಬಾಲಕಿ ಮೃತ ದೇಹ ಅತ್ಯಚಾರವೆಸಗಿರುವ ಸ್ಥಿತಿಯಲ್ಲಿ ಗದ್ದೆಯಲ್ಲಿ ಪತ್ತೆಯಾಗಿದೆ. ಇನ್ನು ಬಾಲಕಿಯ ಮರಣೋತ್ತರ ವರದಿ ಬಂದಿದ್ದು ಅತ್ಯಚಾರವೆಸಗಿ ಕೊಲೆ ಮಾಡಿರುವುದು ತಿಳಿದುಬಂದಿದೆ.ಇನ್ನು ಬಾಲಕಿಯ ತಂದೆ ಪಕ್ಕದ ಹಳ್ಳಿಯ ಲೇಖ್ರಾಮ್ ಎಂಬವರ ಮೇಲೆ ಆರೋಪ ಹೊರಿಸಿದ್ದು ಹಳೇ ದ್ವೇಷ ಹಿನ್ನೆಲೆ ಈ ಕೃತ್ಯ ಎಸಗಿರುವ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಇನ್ನು ಇತ್ತೀಚೆಗೆ ಸ್ಕಾಲರ್ಶಿಪ್ ಅರ್ಜಿ ಭರ್ತಿ ಮಾಡಲೆಂದು ಮನೆಯಿಂದ ಶಾಲೆಗೆ ತೆರಳಿದ್ದ 17 ವರ್ಷದ ಯುವತಿ ನಾಪತ್ತೆಯಾಗಿದ್ದಳು. ಬಳಿಕ ಪಾಳು ಕೆರೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಈ ಘಟನೆಗೂ ಮುನ್ನ 13 ವರ್ಷದ ಬಾಲಕಿಯೊಬ್ಬಳು ಕೂಡ ಅತ್ಯಚಾರ ಹಾಗೂ ಕೊಲೆಯಾಗಿತ್ತು