ದೇಶ

ಸಾರ್ವಜನಿಕ ಹಿತಕ್ಕಾಗಿ ಲೈಂಗಿಕ ಕಿರುಕುಳ ಬಹಿರಂಗ-ನ್ಯಾಯಾಲಯಕ್ಕೆ ಪತ್ರಕರ್ತೆ ಪ್ರಿಯಾ ರಮಣಿ

Nagaraja AB

ನವದೆಹಲಿ: ಸಾರ್ವಜನಿಕ ಹಿತಕ್ಕಾಗಿ  ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ್ದಾಗಿ ಮಾಜಿ ಕೇಂದ್ರ ಸಚಿವ ಎಂ. ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ, ನ್ಯಾಯಾಲಯವೊಂದಕ್ಕೆ ಇಂದು ಹೇಳಿದ್ದಾರೆ.

ಪ್ರಿಯಾ ರಮಣಿ ವಿರುದ್ಧ ಅಕ್ಬರ್ ಸಲ್ಲಿಸಿದ್ದ ಕ್ರಿಮಿನಲ್ ಮಾನಷ್ಟ ದೂರಿನ ಅಂತಿಮ ವಿಚಾರಣೆ ಸಂದರ್ಭದಲ್ಲಿ ತಮ್ಮ ವಕೀಲರ ಮೂಲಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಮುಂದೆ ರಮಣಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

20 ವರ್ಷದ ಹಿಂದೆ ಪತ್ರಕರ್ತೆಯಾಗಿದ್ದಾಗ ಎಂಜಿ ಅಕ್ಬರ್ ಲೈಂಗಿಕ ಕಿರುಕುಳ ನೀಡಿರುವುದಾಗಿ 2018ರಲ್ಲಿ #ಮೀಟೂ ಆಂದೋಲನದ ವೇಳೆಯಲ್ಲಿ ರಮಣಿ ಆರೋಪಿಸಿದ್ದರು. 2018 ಅಕ್ಟೋಬರ್ 17ರಂದು ಅಕ್ಬರ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಾನೂನಿನ ಪ್ರಕಾರ ಸಾರ್ವಜನಿಕ ಒಳಿತಿಗಾಗಿ ಯಾವುದೇ ವ್ಯಕ್ತಿಯ ಸತ್ಯ ಹೇಳುವುದು ಮಾನಹಾನಿಯಲ್ಲ ಎಂದು ರಮಣಿ ಪರ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ರೆಬೆಕ್ಕಾ ಜಾನ್ ಹೇಳಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿದ ನಿಜವಾದ ಅಪಖ್ಯಾತಿ ಮಾನಹಾನಿಯಲ್ಲ, ಇನ್ನೊಬ್ಬರ ಹಿತಸಕ್ತಿಯ ರಕ್ಷಣೆಗಾಗಿ
ಇನ್ನೊಬ್ಬರ ಮೇಲೆ ದೋಷಾರೋಪಣೆ ಮಾಡುವುದು ಮಾನಹಾನಿಯಲ್ಲ,ಇದರಲ್ಲಿ ಸತ್ಯವಿದ್ದು,ಸಾರ್ವಜನಿಕರ ಒಳಿತಿಗೆ ಸಂಬಂಧಿಸಿದೆ ಎಂದು ಅವರು ವರ್ಚುವಲ್ ವಿಚಾರಣೆಯ  ಸಮಯದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.   

SCROLL FOR NEXT