ದೇಶ

ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಶೋಯಿಕ್,ಮಿರಾಂಡಾ ನಾಲ್ಕು ದಿನಗಳ ಕಾಲ ಎನ್ ಸಿಬಿ ವಶಕ್ಕೆ 

Nagaraja AB

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ನಿನ್ನೆ ಸಂಜೆ ಬಂಧಿಸಿದ್ದ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಮತ್ತು ಆಪ್ತ ಸಹಾಯಕ  ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ವ್ಯವಸ್ಥಾಪಕ  ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು  ಸೆಪ್ಟೆಂಬರ್ 9ರವರೆಗೊ ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಇದೇ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಕೈಜೆನ್ ಇಬ್ರಾಹಿನನ್ನು  14 ದಿನಗಳ ಕಾಲ ಜ್ಯುಡಿಷಿಯಲ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಹೋದರ ಶೋಯಿಕ್  ಪ್ರಮುಖ ಆರೋಪಿಯಾಗಿದ್ದು,ಇಬ್ಬರನ್ನು ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಎನ್ ಡಿಪಿಎಸ್ ಕಾಯ್ದೆಯ ಸೆಕ್ಷನ್ 29, 28, 27 ಎ, 20 ಬಿ ಅಡಿಯಲ್ಲಿ ಶೋಯಿಕ್ ಮತ್ತು ಸ್ಯಾಮುಯೆಲ್ ಮಿರಾಂಡಾ ಅವರನ್ನು ಬಂಧಿಸಲಾಗಿದೆ ಎಂದು ಎನ್ ಸಿಬಿ ಉಪ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

SCROLL FOR NEXT