ದೇಶ

ಜನರನ್ನು ಭಯದ ವಾತವಾರಣದಲ್ಲಿಡಲು ಬಯಸುವ ಬಿಹಾರ ಸರ್ಕಾರ- ತೇಜಸ್ವಿ ಯಾದವ್

Nagaraja AB

ಪಾಟ್ನಾ:  ಜನತೆಯನ್ನು ಭಯದ ವಾತವಾರಣದಲ್ಲಿ ಇಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಬಯಸುತ್ತದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ರಾಷ್ಟ್ರೀಯ ಅಪರಾಧ ವರದಿ ಪ್ರಕಾರ ಬಿಹಾರದಲ್ಲಿ ಅಪರಾಧಗಳ ಸಂಖ್ಯೆ ಶೇ. 40 ರಷ್ಟಿದೆ. ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ
ಅತ್ಯಾಚಾರ ನಡೆಯುತ್ತಿವೆ. ಪ್ರತಿ ಐದು ಗಂಟೆಗೆ ಒಂದು ಕೊಲೆ, ನಾಲ್ಕು ಗಂಟೆಗೆ ಅತ್ಯಾಚಾರ ನಡೆಯುತ್ತಿರುವುದಾಗಿ
ಅವರು ಹೇಳಿದ್ದಾರೆ.

ಈ ಅಪರಾಧಗಳ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಬೇಕಾಗಿದೆ ಎಂದು ತೇಜಸ್ವಿ ಯಾದವ್ ಒತ್ತಾಯಿಸಿದ್ದಾರೆ.

SCROLL FOR NEXT