ದೇಶ

ತನ್ನ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಾಗಿ 16 ಸ್ಮಾರ್ಟ್‌ಫೋನ್‌ ಖರೀದಿಸಿದ ತಮಿಳುನಾಡು ಶಿಕ್ಷಕಿ 

Lingaraj Badiger

ಪೆರಂಬಲೂರು: ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಅನಿವಾರ್ಯವಾಗಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತನ್ನಉಳಿತಾಯದ ಹಣದಿಂದ ವಿದ್ಯಾರ್ಥಿಗಳಿಗೆ 16 ಸ್ಮಾರ್ಟ್‌ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಖರೀದಿಸಿದ್ದಾರೆ.

ಸ್ಮಾರ್ಟ್ ಫೋನ್ ಗಾಗಿ ಒಂದು ಲಕ್ಷ ಖರ್ಚು ರೂ. ಖರ್ಚು ಮಾಡಿರುವ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ಕೆ ಬೈರವಿ ಅವರು, ಖಾಸಗಿ ಶಾಲೆಗಳಂತೆಯೇ ತನ್ನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಗಳನ್ನು ನಡೆಸಲು ಬಯಸುತ್ತೇನೆ ಎಂದು ಎಲಾಂಬಲೂರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಕೆಯ ವಿದ್ಯಾರ್ಥಿಗಳು ಮುಂದಿನ ವರ್ಷ ಬೋರ್ಡ್ ಪರೀಕ್ಷೆಗೆ ಹಾಜರಾಗಲಿದ್ದಾರೆ. ಅವರ ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಂಡು, ಅವರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಪಾಠ ಕಲಿಯಲು ಸಿಮ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಿಸಿದ್ದಾರೆ.

"ನಾವು ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿ, ಮಕ್ಕಳು ಆನ್ ಲೈನ್ ತರಗತಿಗಳಿಗೆ ಹಾಜರಾಗುವಂತೆ ಮಾಡಲು ವಿವಿಧ ಹಳ್ಳಿಗಳಿಗೆ ಹೋಗಿದ್ದೆವು. ಅಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಬಡತನದಲ್ಲಿ ವಾಸಿಸುತ್ತಿರುವುದನ್ನು ನಾನು ನೋಡಿದೆ. ಇದನ್ನು ನೋಡಿದ ನಂತರ ನನಗೆ ತುಂಬಾ ಬೇಸರವಾಯಿತು" ಎಂದು ಕೆ ಬೈರವಿ ಹೇಳಿದ್ದಾರೆ.

"ಲಾಕ್‌ಡೌನ್ ಕಾರಣದಿಂದಾಗಿ, ನಾನು ಕಳೆದ ಕೆಲವು ವಾರಗಳಿಂದ ನನ್ನ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಕಲಿಸುತ್ತಿದ್ದೇನೆ. ಆದರೆ ಅವರಲ್ಲಿ ಕೆಲವರು ಸ್ಮಾರ್ಟ್‌ಫೋನ್ ಹೊಂದಿಲ್ಲ ಮತ್ತು ರೀಚಾರ್ಜ್ ಮಾಡಲು ಹಣವಿಲ್ಲ. ಇದಕ್ಕಾಗಿಯೇ ನಾನು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ನಿರ್ಧರಿಸಿದೆ ಮತ್ತು ಅವುಗಳನ್ನು ನನ್ನ ವಿದ್ಯಾರ್ಥಿಗಳಿಗೆ ವಿತರಿಸಿದೆ" ಎಂದಿದ್ದಾರೆ.

SCROLL FOR NEXT