ಮಹಾರಾಷ್ಟ್ರ ರಾಜ್ಯಪಾಲ ಕೊಶಿಯಾರಿ, ಕಂಗನಾ 
ದೇಶ

ಮಹಾರಾಷ್ಟ್ರ: ಕಂಗನಾ ರಣಾವತ್ ಪರ ರಾಜ್ಯಪಾಲರು ಬ್ಯಾಟಿಂಗ್!

ಬಾಲಿವುಡ್ ನಟಿ ಕಂಗನಾ ರಣಾವತ್ ಎಪಿಸೋಡ್ ನಿರ್ವಹಣೆ ಹಾಗೂ ಆಕೆಯ ಬಾಂದ್ರಾದಲ್ಲಿನ ನಿವಾಸದ ಕೆಲ ಭಾಗಗಳನ್ನು ಧ್ವಂಸಗೊಳಿಸಿರುವ ಬೃಹತ್ ಮುಂಬೈ ಪಾಲಿಕೆ ವಿರುದ್ಧ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಬಿ.ಎಸ್. ಕೊಶಿಯಾರಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮುಂಬೈ:  ಬಾಲಿವುಡ್ ನಟಿ ಕಂಗನಾ ರಣಾವತ್ ಎಪಿಸೋಡ್ ನಿರ್ವಹಣೆ ಹಾಗೂ ಆಕೆಯ ಬಾಂದ್ರಾದಲ್ಲಿನ ನಿವಾಸದ ಕೆಲ ಭಾಗಗಳನ್ನು ಧ್ವಂಸಗೊಳಿಸಿರುವ ಬೃಹತ್ ಮುಂಬೈ ಪಾಲಿಕೆ ವಿರುದ್ಧ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಬಿ.ಎಸ್. ಕೊಶಿಯಾರಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನ ಸಲಹೆಗಾರ ಅಜಯ್ ಮೆಹ್ತಾ ಅವರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದು, ಇಡೀ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ.

ಬೃಹನ್ ಮುಂಬೈ ಪಾಲಿಕೆ ಠಾಕ್ರೆ ನೇತೃತ್ವದ ಶಿವಸೇನಾ ನಿಯಂತ್ರಣದಲ್ಲಿದೆ. ಪಾಲಿಕೆಯ ಅನುಮತಿ ಪಡೆಯದೆ ಪಾಲಿಕೆ ತಂಡ
ಬುಲ್ಡೆಜರ್ ಮತ್ತು ಅಗೆಯುವ ಯಂತ್ರಗಳಿಂದ ರಣಾವತ್ ಬಂಗ್ಲೆಯ ಕೆಲ ಭಾಗಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪವಿದೆ.

ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಂಗನಾ ರಣಾವತ್ ಹೋಲಿಸಿದ ಬಳಿಕ ಶಿವಸೇನೆ ಹಾಗೂ ಆಕೆಯ ನಡುವೆ ವಾಕ್ ಸಮರ ನಡೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಿನಿಮಾ ಮಾಫಿಯಾಗಿಂತಲೂ ಮುಂಬೈ ಪೊಲೀಸರು ಕಂಡರೆ ಭಯವಾಗುವುದಾಗಿ ಕಂಗನಾ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT