ದೇಶ

ನ್ಯಾಯಾಂಗ ನಿಂದನೆ; ಪ್ರಶಾಂತ್‌ ಭೂಷಣ್‌ ಪ್ರಕರಣದ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

Raghavendra Adiga

ನವದೆಹಲಿ: ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅ.12ಕ್ಕೆ ಮುಂದೂಡಿದೆ.

ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರ ಮನವಿ ಮೇರೆಗೆ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿದೆ. 

ಈ ಪ್ರಕರಣವನ್ನು ಈ ಹಿಂದೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದ್ದು, ಈಗ ಅರುಣ್ ಮಿಶ್ರಾ ನಿವೃತ್ತರಾಗಿದ್ದಾರೆ.

ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಕೆಲ ಹಾಲಿ ಹಾಗೂ ಮಾಜಿ ಉನ್ನತ ನ್ಯಾಯಾಲಯದ ನ್ಯಾಯಾಧೀಶರ ಮೇಲೆ  ಆರೋಪ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ 2009 ರ ನವೆಂಬರ್‌ನಲ್ಲಿ ಅಂದಿನ ತೆಹಲ್ಕಾ ನಿಯತಕಾಲಿಕೆಯ ಪ್ರಧಾನ ಸಂಪಾದಕ  ತರುಣ್ ತೇಜ್‌ಪಾಲ್ ಹಾಗೂ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ನಿಂದನೆ ನೋಟೀಸ್ ನೀಡಿತ್ತು. 

ಒಬ್ಬ ವ್ಯಕ್ತಿಯು ನ್ಯಾಯಾಂಗದ ವಿರುದ್ಧ ಯಾವಾಗ ಆರೋಪಗಳನ್ನು ಎತ್ತಬಹುದು ಅಥವಾ ಅವನಿಗೆ ಮಾದ್ಯಮಗಳೆದುರು  ಹೋಗಲು ಅನುಮತಿ ಇದೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ಅನೇಕ  ವಿಧದಲ್ಲಿ ಪರಿಶೀಲನೆ ನಡೆಸುತ್ತಿದೆ. ನ್ಯಾಯಾಲಯವು ಈಗ ಅಕ್ಟೋಬರ್ 12 ರಂದು ಮತ್ತೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಿದೆ.
 

SCROLL FOR NEXT