ಎಂ ಜೋತಿಶ್ರೀ ದುರ್ಗಾ 
ದೇಶ

ತಮಿಳುನಾಡಿನಲ್ಲಿ19 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ, ವಾರದಲ್ಲಿದು ಎರಡನೇ ಘಟನೆ! 

ನನ್ನನ್ನು ಕ್ಷಮಿಸಿ, ನಾನು ದಣಿದಿದ್ದೇನೆ. . ನಾನು ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯದಿದ್ದರೆ ನಿಮಗೆ ನಿರಾಶೆಯಾಗಲಿದೆ.  ಹಾಗಾಗಿ ನನಗೆ ಭಯವಾಗುತ್ತಿದೆ.- ಹೀಗೆಂದು ಮಧುರೈನ 19 ವರ್ಷದ ನೀಟ್ ಆಕಾಂಕ್ಷಿಯಾದ ಎಂ ಜೋತಿಶ್ರೀ ದುರ್ಗಾ  ಅವರ  ಪೋಷಕರಿಗೆ  ಹೇಳಿದ ಕಡೇ ಮಾತುಗಳು. ಕುಟುಂಬ ಸದಸ್ಯರಿಗೆ ಪತ್ರವೊಂದನ್ನು ಬರೆದ ನಂತರ ಶನಿವಾರ ಮಧುರೈನಲ್ಲಿ ನೀಟ್ ಪರೀಕ್ಷೆಗೆ ಒಂ

ಮಧುರೈ: ನನ್ನನ್ನು ಕ್ಷಮಿಸಿ, ನಾನು ದಣಿದಿದ್ದೇನೆ. . ನಾನು ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯದಿದ್ದರೆ ನಿಮಗೆ ನಿರಾಶೆಯಾಗಲಿದೆ.  ಹಾಗಾಗಿ ನನಗೆ ಭಯವಾಗುತ್ತಿದೆ.- ಹೀಗೆಂದು ಮಧುರೈನ 19 ವರ್ಷದ ನೀಟ್ ಆಕಾಂಕ್ಷಿಯಾದ ಎಂ ಜೋತಿಶ್ರೀ ದುರ್ಗಾ  ಅವರ  ಪೋಷಕರಿಗೆ  ಹೇಳಿದ ಕಡೇ ಮಾತುಗಳು. ಕುಟುಂಬ ಸದಸ್ಯರಿಗೆ ಪತ್ರವೊಂದನ್ನು ಬರೆದ ನಂತರ ಶನಿವಾರ ಮಧುರೈನಲ್ಲಿ ನೀಟ್ ಪರೀಕ್ಷೆಗೆ ಒಂದು ದಿನ ಬಾಕಿ ಇರುವಂತೆ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೂಲಗಳ ಪ್ರಕಾರ ಜೋತಿಶ್ರೀ ದುರ್ಗಾ ಸಬ್ ಇನ್ಸ್‌ಪೆಕ್ಟರ್ (ಬೆಟಾಲಿಯನ್)  ಆಗಿರುವ ಮುರುಗಸುಂದರಂ ಅವರ ಪುತ್ರಿ.ಈಕೆ  ಭಾನುವಾರ ನಡೆಯಲಿದ್ದ  ನೀಟ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಿದ್ದರು.

ವಿಶೇಷವೆಂದರೆ ಜೋತಿಶ್ರೀ ದುರ್ಗಾ ಈ ಹಿಂದೆ ಸಹ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.  ಕಳೆದ ವರ್ಷ ಪರೀಕ್ಷೆತೇರ್ಗಡೆ ಆಗಲು ಸಾಧ್ಯವಾಗದ ಕಾರಣ ತೀರ ಒತ್ತಡಕ್ಕೆ ಒಳಗಾಗಿದ್ದ ಈಕೆ ಖಿನ್ನತೆಗೆ ಸರಿದು ಆತ್ಮಹತ್ಯೆಗೆ ಮುಂದಾಗಿದ್ದರು. ನಿನ್ನೆ ತಡರಾತ್ರಿಯವರೆಗೆ ಪರೀಕ್ಷೆಗೆ ತಯಾರಿ ನಡೆಸಿದ್ದ ಜೋತಿಶ್ರೀ  ಪೋಷಕರು ಬೆಳಿಗ್ಗೆಆಕೆಯ ಕೋಣೆಗೆ ಹೋದಾಗ ಮೃತಪಟ್ಟಿರುವುದು ತಿಳಿದಿದೆ.

ಹೃದಯ ಕಲಕುವ ಡೆತ್ ನೋಟಿನಲ್ಲಿ ಜೋತಿಶ್ರೀ ದುರ್ಗಾ ತನ್ನ ಹೆತ್ತವರು ಮತ್ತು ಕುಟುಂಬ ಸದಸ್ಯರಿಗೆ  "ನೀವೆಲ್ಲರೂ ನನ್ನ ಮೇಲೆ ತುಂಬಾ ನಿರೀಕ್ಷೆಗಳನ್ನು ಹೊಂದಿದ್ದೀರಿ, ಆದರೆ ಕ್ಷಮಿಸಿ. ನಾನು ವೈದ್ಯಕೀಯ ಕೋರ್ಸ್ ಗೆ ಆಯ್ಕೆಯಾಗಲು ವಿಫಲವಾದರೆ , ನನಗಾಗಿ ನಿಮ್ಮ ಎಲ್ಲಾ ಶ್ರಮಗ ವ್ಯರ್ಥವಾಗಲಿದೆ. ನಾನು ನಿನ್ನನ್ನು ನಿರಾಶೆಗೊಳಿಸುತ್ತೇನೆ. ಕ್ಷಮಿಸಿ. ನಾನು ದಣಿದಿದ್ದೇನೆ. " ಎಂದು  ಬರೆದಿದ್ದಾರೆ. ಮಾತ್ರವಲ್ಲದೆ "ನಾನು ನನ್ನ ಹೆತ್ತವರನ್ನು  ಪ್ರೀತಿಸುತ್ತಿದ್ದೇನೆ ಮತ್ತು ಅವರೆಲ್ಲರ ಪ್ರೀತಿಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. " ಎಂದು ಆಕೆ ತನ್ನ ತಂದೆಗೆ ಕಳಿಸಿದ್ದ ಕಡೆಯ ಆಡಿಯೋ ರೆಕಾರ್ಡ್ ನಲ್ಲಿ ಹೇಳಿದ್ದಾರೆ.

ಇನ್ನು ತನ್ನ ಸೋದರನಿಗೆ ಸಲಹೆ ನೀಡಿರುವ ಜೋತಿಶ್ರೀ ದುರ್ಗಾ "ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ, ವಿಡಿಯೋ ಗೇಮ್‌ಗಳನ್ನು ಆಡುವುದನ್ನು ತಪ್ಪಿಸು, ತಂದೆಯ ಆರೋಗ್ಯ ಉತ್ತಮವಾಗಿ ನೋಡಿಕೊಳ್ಳು" ಎಂದಿದ್ದಾರೆ. 

ತಮಿಳುನಾಡಿನಲ್ಲಿ ಕಳೆದೊಂದು ವಾರದಲ್ಲಿ ಇದು ಇಂತಹಾ ಎರಡನೇ ಪ್ರಕರಣವಾಗಿದೆ. ಮೂರು ದಿನಗಳ ಹಿಂದೆ ಅರಿಯಲೂರಿನ 19 ವರ್ಷದ ಯುವಕ ವಿಘ್ನೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. . ವಿಘ್ನೇಶ್ ಈ ಮೊದಲು ಎರಡು ಬಾರಿ ನೀಟ್ ಪರೀಕ್ಷೆಯನ್ನು ತೆಗೆದುಕೊಂಡಿದ್ದು  ಒಮ್ಮೆ ಉತ್ತೀರ್ಣವಾಗಿದ್ದರೂ ಕಾಲೇಜಿನಲ್ಲಿ ಸೀಟು ಪಡೆಯಲು ಆಗಿರಲಿಲ್ಲ. ಈ ವರ್ಷವೂ ವಿಫಲವಾಗಬಹುದೆಂಬ ಭಯದಿಂದ ಅವರು ಆತ್ಮಹತ್ಯೆ ಮಡಿಕೊಂಡಿದ್ದಾರೆ.

ಏತನ್ಮಧ್ಯೆ ಇನ್ನೊಬ್ಬ ನೀಟ್ ಆಕಾಂಕ್ಷಿ ಪುದುಕೊಟ್ಟೈನ  17 ವರ್ಷದ ಬಾಲಕಿ ಈ ತಿಂಗಳ ಆರಂಭದಲ್ಲಿ ತನ್ನ ನೀಟ್ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನೊಬ್ಬ ಆಕಾಂಕ್ಷಿ, ಕೊಯಮತ್ತೂರಿನ 19 ವರ್ಷದ ಸುಬಶ್ರೀ ಸಹ  ಇದೇ ಕಾರಣಗಳಿಗಾಗಿ ಕಳೆದ ತಿಂಗಳು ತನ್ನ ಜೀವನವನ್ನು ಕೊನೆಗೊಳಿಸಿದ್ದಳು. ಸೆಪ್ಟೆಂಬರ್ 1, 2017 ರಂದು, ಅರಿಯಲೂರಿನ ಎಸ್ ಅನಿತಾ ನೀಟ್ ಪರೀಕ್ಷೆ ಪಾಸ್ ಮಾಡಲು ವಿಫಲವಾಗಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಳು.ಈ ಸಾವು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT