ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 
ದೇಶ

ಕೋವಿಡ್-19 ಲಸಿಕೆ ತುರ್ತು ಬಳಕೆ ದೃಢೀಕರಣಕ್ಕೆ ಕೇಂದ್ರದ ಚಿಂತನೆ: ಆರೋಗ್ಯ ಸಚಿವ ಹರ್ಷವರ್ಧನ್ 

ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ದೃಢೀಕರಣ, ಅಧಿಕಾರ ನೀಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 

ನವದೆಹಲಿ: ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ದೃಢೀಕರಣ, ಅಧಿಕಾರ ನೀಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 

ಸೆ.13 ರಂದು ಸಂಡೇ ಸಂವಾದ್ ಕಾರ್ಯಕ್ರಮದ ಮೂಲಕ ಸಾಮಾಜಿಕ ಜಾಲತಾಣದ ಅನುಯಾಯಿಗಳೊಂದಿಗೆ ಸಂವಾದ ನಡೆಸಿದ ವೇಳೆಯಲ್ಲಿ ಹರ್ಷವರ್ಧನ್ ಈ ಘೋಷಣೆ ಮಾಡಿದ್ದಾರೆ. 

ಕೋವಿಡ್-19 ಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಅಪಾಯಕಾರಿ ಸನ್ನಿವೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯವಾಗುವಂತೆ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ದೃಢೀಕರಣ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. 

ಸರ್ಕಾರದ ಈ ಘೋಷಣೆ ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಗಳು 3 ನೇ ಹಂತ ಮುಕ್ತಾಯಗೊಳ್ಳುವುದಕ್ಕೂ ಮುನ್ನ, ಅವುಗಳ ಫಲಿತಾಂಶವನ್ನು ವಿಶ್ಲೇಷಿಸುವುದಕ್ಕೂ ಮುನ್ನ ನಿರ್ದಿಷ್ಟ ವಿಭಾಗದ ಜನರಿಗೆ ಮಾತ್ರವೇ ನೀಡಲಾಗುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ನೀಡಿದೆ. 

ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಈಗಾಗಲೇ ಇದೇ ಮಾದರಿಯ ಕ್ರಮವನ್ನು ಕೈಗೊಂಡಿದೆ. ಈ ಬೆನ್ನಲ್ಲೇ ಭಾರತವೂ ಸಹ ಅಮೆರಿಕ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಸಮಗ್ರ ಚರ್ಚೆ ಹಾಗೂ ಒಮ್ಮತಕ್ಕೆ ಬಂದ ನಂತರವಷ್ಟೇ ಕೋವಿಡ್-19 ಲಸಿಕೆ ತುರ್ತು ಬಳಕೆ ದೃಢೀಕರಣದ ಅಧಿಕೃತ ಆದೇಶ ನೀಡಲಾಗುತ್ತದೆ. ಇದನ್ನು ಔಷಧ ನಿಯಂತ್ರಕವಷ್ಟೇ ಮಾದಲು ಸಾಧ್ಯ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಹೊಸ ಖಮೇನಿ ಭಯೋತ್ಪಾದಕ ನಾಯಕ; ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ: ಅಮೆರಿಕ

ಒಡಿಶಾ 'ಕೈ' ಶಾಸಕರಿಗೆ' ಟ್ರಬಲ್ ಶೂಟರ್ ಡಿಕೆಶಿ ಆತಿಥ್ಯ: 'ಆಪರೇಷನ್ ಕಮಲ' ತಡೆಗೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮ; ಕಾಂಗ್ರೆಸ್ ಸಮರ್ಥನೆ

ಬೇಸಿಗೆಯಲ್ಲಿ ಬತ್ತಿದ ಬೋರ್ ವೆಲ್ ಗಳು: ಬೆಂಗಳೂರಿನ ಧೋಬಿ ಘಾಟ್ ಗಳಲ್ಲಿ ನೀರಿನ ಅಭಾವ!

SCROLL FOR NEXT